ದೇಹದಲ್ಲಿನ ಹೆಚ್ಚುವರಿ ನೀರಿನಾಂಶವನ್ನು ತೆಗೆದು ಹಾಕಲು ಮೂತ್ರಪಿಂಡ ಸಹಾಯ ಮಾಡುತ್ತದೆ. ನೀರು, ಲವಣ ಮತ್ತು ಖನಿಜಗಳ ಸಮತೋಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ದೇಹದ ಭಾಗವಾಗಿದೆ.
									
										
								
																	
ಮೂತ್ರಪಿಂಡದ ಆರೋಗ್ಯ ಸರಿಯಾಗಿಲ್ಲದಿದ್ದರೆ ನಿಮ್ಮ ನರಗಳು, ಸ್ನಾಯುಗಳು ಮತ್ತು ದೇಹದಲ್ಲಿನ ಇತರ ಅಂಗಾಂಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಮೂತ್ರಪಿಂಡದ ಆರೋಗ್ಯ ತುಂಬಾ ಮುಖ್ಯ ಎಂಬುದು ಗಮನದಲ್ಲಿರಲಿ. ನೀವು ಪ್ರತಿನಿತ್ಯ ಮಾಡುವ ಈ ಕೆಲವು ತಪ್ಪುಗಳು ನಿಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳಿ.
									
			
			 
 			
 
 			
					
			        							
								
																	ನೋವು ನಿವಾರಕಗಳನ್ನು ಹೆಚ್ಚು ಬಳಸುವುದು
									
										
										
								
																	
ಕೆಲವರು ಮೈಕೈ ನೋವು ನಿವಾರಣೆಗಾಗಿ ಹೆಚ್ಚು ಮಾತ್ರೆಗಳಿಗೆ ಅವಲಂಬಿತರಾಗಿರುತ್ತಾರೆ. ಮುಖ್ಯವಾಗಿ ಗಮನಿಸುವ ವಿಷಯವೆಂದರೆ ಈಗಾಗಲೇ ಯಾರಾದರೂ ಮೂತ್ರಪಿಂಡದ ಖಾಯಿಲೆಗೆ ಒಳಗಾಗಿದ್ದರೆ ನೋವು ನಿವಾರಕ ಮಾತ್ರೆಗಳ ಬಳಕೆಯ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆಯಿರಿ. ಮೂತ್ರಪಿಂಡದ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ನೋವು ನಿವಾರಕ ಮಾತ್ರೆಗಳನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಹೆಚ್ಚು ಉಪ್ಪು ಸೇವನೆ
									
										
										
								
																	
ಉಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ. ಇದರಿಂದ ಮೂತ್ರಪಿಂಡದ ಖಾಯಿಲೆ ಅಪಾಯವನ್ನು ಹೆಚ್ಚಿಸಬಹುದು. ಉಪ್ಪಿನ ಬದಲಿಗೆ ಗಿಡಮೂಲಿಕೆಯ ಮಸಾಲೆಯೊಂದಿಗೆ ನಿಮ್ಮ ಆಹಾರವನ್ನು ರುಚಿಗೊಳಿಸಬಹುದು. ಸಾಧ್ಯವಾದಷ್ಟು ಅಧಿಕ ಉಪ್ಪು ಸೇವನೆಯನ್ನು ನಿಯಂತ್ರಿಸಿ.
ಸಂಸ್ಕರಿಸಿದ ಆಹಾರವನ್ನು ತಿನ್ನುವುದು
									
										
										
								
																	
ಸಂಸ್ಕರಿಸಿದ ಆಹಾರದಲ್ಲಿ ಸೋಡಿಯಂ ಮತ್ತು ಫಾಸ್ಪರಸ್ ತುಂಬಿರುತ್ತದೆ. ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿರುವ ಜನರು ಪ್ಯಾಕೇಜ್ ಮಾಡಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು. ಸಂಸ್ಕರಿಸಿದ ಆಹಾರದವು ಮೂಳೆಗಳ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ.
ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಿ
ನಿಮ್ಮನ್ನು ಹೈಡ್ರೇಟ್ ಆಗಿರಿಸಿಕೊಳ್ಳುವುದರಿಂದ ನಿಮ್ಮ ಮೂತ್ರಪಿಂಡಗಳು ವಿಷದ ಅಂಶವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಸಾಕಷ್ಟು ನೀರು ಕುಡಿಯುವುದು ಮೂತ್ರಪಿಂಡದ ಆರೋಗ್ಯ ಸುಧಾರಣೆಗೆ ಅವಶ್ಯಕ. ಪ್ರತಿನಿತ್ಯ 3 ರಿಂದ 4 ಲೀಟರ್ ನೀರು ಕುಡಿಯುವ ಅಭ್ಯಾಸವನ್ನು ಇಟ್ಟುಕೊಳ್ಳಿ.
ಅತಿಯಾಗಿ ಸಕ್ಕರೆ ಸೇವಿಸುವುದು
									
										
										
								
																	
ಅತಿಯಾಗಿ ಸಕ್ಕರೆ ಸೇವಿಸುವುದು ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಅಪಾಯವನ್ನು ಹೆಚ್ಚಿಸುತ್ತದೆ. ಇವು ಮೂತ್ರಪಿಂಡದ ಖಾಯಿಲೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಅಧಿಕ ಸಕ್ಕರೆಯುಕ್ತ ಪದಾರ್ಥಗಳು ಮತ್ತು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುವುದನ್ನು ಕಡಿಮೆ ಮಾಡಿ.