Publish Date: Thu, 28 Apr 2022 (13:08 IST)
Updated Date: Thu, 28 Apr 2022 (20:05 IST)
ಗಾಂಧಿನಗರ : 9ನೇ ತರಗತಿ ವಿದ್ಯಾರ್ಥಿಯೋರ್ವನಿಗೆ ಸೀನಿಯರ್ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ನಗರದ ಕೇಂದ್ರೀಯ ವಿದ್ಯಾಲಯ ಶಾಲೆಯೊಂದರಲ್ಲಿ ಮಂಗಳವಾರ ನಡೆದಿದೆ.
ಘಟನೆ ಕುರಿತು ವಿದ್ಯಾರ್ಥಿಯ ತಾಯಿ ಮಾತನಾಡಿ, ತಮ್ಮ ಮಗ ಹಾಗೂ ಆತನ ಸ್ನೇಹಿತರಿಗೆ ಅದೇ ಶಾಲೆಯ ಸೀನಿಯರ್ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ, 12ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಏಪ್ರಿಲ್ 20 ರಂದು ಶಾಲಾ ಸಮಯದಲ್ಲಿ ತಮ್ಮ ಮಗ ಮತ್ತು ಇತರ ಕೆಲವರನ್ನು ಶೌಚಾಲಯಕ್ಕೆ ಕರೆದೊಯ್ದು ಮೂತ್ರ ಕುಡಿಸಲು ಪ್ರಯತ್ನಿಸಿದ್ದಾರೆ ಎಂದು ಏಪ್ರಿಲ್ 22 ರಂದು ವಸ್ತ್ರಾಪುರ ಠಾಣೆಗೆ ದೂರು ನೀಡಿದ್ದರು.
ಶಾಲೆಯ ಪ್ರಾಂಶುಪಾಲರಾದ ಜೇಮಿ ಜೇಮ್ಸ್ ಅವರು ಈ ವಿಷಯವಾಗಿ ಎರಡು ವಿಚಾರಣೆಗಳನ್ನು ನಡೆಸಿದ್ದಾರೆ. ಆದರೆ ಗಂಭೀರವಾದ ಅಂಶ ಏನೂ ಕಂಡುಬಂದಿಲ್ಲ.
ಘಟನೆ ಸಂಭವಿಸಿದ ಕೂಡಲೇ ನಾವು ಗುರುವಾರದಂದು ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ. ವಿಚಾರಣೆ ಪೂರ್ಣಗೊಂಡಿದ್ದು, ಅದರಲ್ಲಿ ಏನೂ ಇಲ್ಲ ಎಂದು ತಿಳಿಸಿದ್ದಾರೆ.