Select Your Language

Notifications

webdunia
webdunia
webdunia
webdunia

ಯುದ್ದವನ್ನು ಗೆದ್ದಿದ್ದೇವೆ ಎಂದು ಭಾವಿಸಬೇಡಿ, ತಕ್ಕ ಉತ್ತರ ನೀಡದೇ ಸುಮ್ಮನಿರಲ್ಲ: ಪಾಕ್‌ಗೆ ಅಮಿತ್ ಶಾ ಎಚ್ಚರಿಕೆ

ಗೃಹ ಸಚಿವ ಅಮಿತ್ ಶಾ

Sampriya

ಬೆಂಗಳೂರು , ಗುರುವಾರ, 1 ಮೇ 2025 (18:38 IST)
Photo Credit X
ಬೆಂಗಳೂರು: ಒಂದೇ ಒಂದು ಭಯೋತ್ಪಾದಕನನ್ನು ಬಿಡುವುದಿಲ್ಲ, ಅದುವರೆಗೂ ಹೋರಾಟ ಮುಗಿಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಎಚ್ಚರಿಕೆ ನೀಡಿದರು.

ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಉಗ್ರರು ಯುದ್ದವನ್ನು ಗೆದ್ದಿದ್ದೇವೆ ಎಂದು ಭಾವಿಸಬೇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಎಚ್ಚರಿಸಿದ್ದಾರೆ.

ಪಹಲ್ಗಾಮ್ ನಂತರದ ತನ್ನ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಅಮಿತ್ ಶಾ ಹೇಳಿದರು. ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನಮ್ಮ 27 ಮುಗ್ದ ಜನರನ್ನು ಕೊಂದ ನಂತರ ಗೆದ್ದಿದ್ದೇವೆ ಎಂದು ಭಾವಿಸಬೇಡಿ. ಅದಕ್ಕೆ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದರು.

ಪಹಲ್ಗಾಮ್‌ನಲ್ಲಿ ನಾಗರಿಕರನ್ನು ಕೊಂದ ಪ್ರತಿಯೊಬ್ಬ ಭಯೋತ್ಪಾದಕನನ್ನು ಹುಡುಕಿ, ಶಿಕ್ಷಿಸಲಾಗುವುದು. ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತದೆ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರ ನೀಡುತ್ತದೆ ಎಂದು ಹೇಳಿದರು.





Share this Story:

Follow Webdunia kannada

ಮುಂದಿನ ಸುದ್ದಿ

ಜಾತಿ ಗಣತಿ: ರಾಹುಲ್ ಗಾಂಧಿಯನ್ನು ಹೆಚ್ಚು ಅಭಿನಂದಿಸುತ್ತೇನೆ: ಸಿಎಂ ಸಿದ್ದರಾಮಯ್ಯ