Select Your Language

Notifications

webdunia
webdunia
webdunia
webdunia

ವಿವಾಹವಾಗಲು ನಿರಾಕರಿಸಿದ ಯುವತಿಗೆ ಯುವಕ ಮಾಡಿದ್ದೇನು ಗೊತ್ತಾ?

young woman
delhi , ಶನಿವಾರ, 18 ನವೆಂಬರ್ 2023 (14:41 IST)
ಯುವತಿ  ಮತ್ತು ಆಕೆಯ ಗೆಳತಿ ನಿನ್ನೆ ಸಂಜೆ ಮಾರುಕಟ್ಟೆಗೆ ತೆರಳಿದ್ದಾಗ ಆರೋಪಿ ಆಸಿಡ್ ದಾಳಿ ನಡೆಸಿದ್ದಾನೆ. ವಿವಾಹವಾಗಲು ನಿರಾಕರಿಸಿದ ಯುವತಿ ಮತ್ತು ಆಕೆಯ ಗೆಳತಿಯ ಮೇಲೆ ಆಸಿಡ್ ಎರಚಿದ ಘಟನೆ ಪಶ್ಚಿಮ ದೆಹಲಿಯಲ್ಲಿ ನಡೆದಿದೆ.
 
ಆರೋಪಿ  ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಜಾಲ ಬೀಸಲಾಗಿದೆ. ಶೀಘ್ರದಲ್ಲಿ ಆತನನ್ನು ಬಂಧಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ತಿಳಿಸಿದ್ದಾರೆ.

ಆರೋಪಿ ಈಗಾಗಲೇ ಮದುವೆಯಾಗಿದ್ದರಿಂದ ಯುವತಿ ಆತನ ವಿವಾಹ ಪ್ರಸ್ತಾಪವನ್ನು ನಿರಾಕರಿಸಿದ್ದಳು.
 
ಆರೋಪಿ ಬಹುದಿನಗಳಿಂದ ನನ್ನ ಪುತ್ರಿಗೆ ಕಿರುಕುಳ ನೀಡುತ್ತಿದ್ದನು. ಆರೋಪಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಅತನನ್ನು ಬಂಧಿಸಲಾಗಿತ್ತು. ಪೊಲೀಸರ ಹೊಡೆತ ತಿಂದ ನಂತರ ಪುತ್ರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದನು. ಇದೀಗ ನಿನ್ನೆ ಮಾರುಕಟ್ಟೆಗೆ ತೆರಳಿದ ಪುತ್ರಿಯ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ ಎಂದು ಯುವತಿಯ ತಾಯಿ ಅರಣ್ಯರೋಧನ ಗೈದಿದ್ದಾರೆ.
 
ಯುವತಿಗೆ ಶೇ.50 ರಷ್ಟು ಗಾಯಗಳಾಗಿದ್ದು, ಆಕೆಯ ಗೆಳತಿಗೆ ಶೇ.20 ರಷ್ಟು ಗಾಯಗಳಾಗಿವೆ. ಇಬ್ಬರನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಇದೀಗ ಲೋಕ್ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯಯೊಂದಿಗೆ ಇಂತಹ ಕೀಳು ಕೃತ್ಯ ಎಸಗಿದ ಪತಿ