Select Your Language

Notifications

webdunia
webdunia
webdunia
webdunia

ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?

ಮಗಳ ಜೊತೆ ಅಸಭ್ಯವಾಗಿ ವರ್ತಿಸಿದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತಾ?
ಹೈದರಾಬಾದ್ , ಭಾನುವಾರ, 30 ಡಿಸೆಂಬರ್ 2018 (07:15 IST)
ಹೈದರಾಬಾದ್ : ಕುಡಿದ ಮತ್ತಿನಲ್ಲಿ ಸ್ವಂತ ಮಗಳ  ಜೊತೆಗೆ ಅಸಭ್ಯವಾಗಿ ವರ್ತಿಸಲು ಮುಂದಾದ ಶಿಕ್ಷಕನೊಬ್ಬನನ್ನು ಆತನ ಪತ್ನಿಯೇ ಹೊಡೆದು ಸಾಯಿಸಿದ ಘಟನೆ ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಕಲ್ಯಾಣದುರ್ಗಂನಲ್ಲಿ ನಡೆದಿದೆ.

ಶೋಭಾರಾಣಿ ಕೊಲೆ ಮಾಡಿದ ಆರೋಪಿ. ಸದಾಶಿವ ಎಂಬಾತನೇ ಮೃತ ಶಿಕ್ಷಕ. ಈತ ಕೊತಚೆರುವು ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಈತ ಪತ್ನಿ ಹಾಗೂ ಮಗಳನ್ನು ಬಿಟ್ಟು ಬೇರೆ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಿದ್ದನು. ಆದರೆ ಬುಧವಾರ ರಾತ್ರಿ ಮನೆಗೆ ಬಂದು ಆತ ಹೆಂಡತಿಯ ಜೊತೆ ಜಗಳವಾಡಿ, ಸ್ವಂತ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದು ಕಂಡು ಸಹಿಸಿದ ಪತ್ನಿ ಆತನ ತಲೆಗೆ ಕಟ್ಟಿಗೆ ತುಂಡಿನಿಂದ ಹೊಡಿದ್ದಾಳೆ. ಸದಾಶಿವನ ತಲೆಗೆ ಬಲವಾಗಿ ಪೆಟ್ಟು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

 

ಗುರುವಾರದಂದು ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿ ಶೋಭಾಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನವಜಾತ ಶಿಶುವಿನ ಕೈ ಮತ್ತು ಪಾದದಲ್ಲಿದ್ದ ಹೆಚ್ಚುವರಿ ಬೆರಳನ್ನು ಕತ್ತರಿಸಿದ ತಾಯಿ. ಕಾರಣವೇನು ಗೊತ್ತಾ?