ಚೆನ್ನೈ : ದ್ವಿತೀಯಾ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತಾನು ಪ್ರೀತಿಸುತ್ತಿದ್ದ ಫೇಸ್ ಬುಕ್ ಗೆಳೆಯನ ಜೊತೆ ಓಡಿಹೋಗಲು ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ.
ಆಂಜನೇಯಪುರಂ ನಿವಾಸಿ ದೇವಿ ಪ್ರೀಯಾ(19) ಪ್ರೀತಿಸಿದವನಿಗೊಸ್ಕರ ಹೆತ್ತ ತಾಯಿಯನ್ನೆ ಕೊಂದ ಆರೋಪಿ. ಈಕೆ ಕಳೆದ ಆರು ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ವಿವೇಕ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಆತನ ಜೊತೆ ಓಡಿಹೋಗಲು ನಿರ್ಧರಿಸಿದ್ದಾಳೆ. ಅದಕ್ಕಾಗಿ ಆತ ಪ್ರಿಯಾಳನ್ನು ಕರೆದುಕೊಂಡು ಬರಲು ತನ್ನ ಇಬ್ಬರು ಗೆಳೆಯರನ್ನು ಕಳುಹಿಸಿದ್ದಾನೆ.
ಆದರೆ ತನ್ನ ಪ್ರಿಯಕರನ ಜೊತೆ ಹೋಗಲು ತಾಯಿ ಭಾನುಮತಿ ಅಡ್ಡ ಬಂದಳು ಎಂಬ ಕಾರಣಕ್ಕೆ ಚಾಕುವಿನಿಂದ ತಾಯಿಯನ್ನೇ ಇರಿದು ಕೊಲೆ ಮಾಡಿದ್ದಾಳೆ. ನಂತರ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ ಮೂವರನ್ನು ನೆರೆಹೊರೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.