Select Your Language

Notifications

webdunia
webdunia
webdunia
webdunia

ನವಜಾತ ಶಿಶುವಿನ ಕೈ ಮತ್ತು ಪಾದದಲ್ಲಿದ್ದ ಹೆಚ್ಚುವರಿ ಬೆರಳನ್ನು ಕತ್ತರಿಸಿದ ತಾಯಿ. ಕಾರಣವೇನು ಗೊತ್ತಾ?

ನವಜಾತ ಶಿಶುವಿನ ಕೈ ಮತ್ತು ಪಾದದಲ್ಲಿದ್ದ ಹೆಚ್ಚುವರಿ ಬೆರಳನ್ನು ಕತ್ತರಿಸಿದ ತಾಯಿ. ಕಾರಣವೇನು ಗೊತ್ತಾ?
ಭೋಪಾಲ್ , ಭಾನುವಾರ, 30 ಡಿಸೆಂಬರ್ 2018 (07:09 IST)
ಭೋಪಾಲ್ : ನವಜಾತ ಶಿಶುವಿನ ಕೈ ಮತ್ತು ಪಾದದಲ್ಲಿದ್ದ ಹೆಚ್ಚುವರಿ ಬೆರಳನ್ನು ತಾಯಿ ಕತ್ತರಿಸಿ ತೆಗೆದ ಕಾರಣ ಮಗು ಸಾವನಪ್ಪಿದ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.


ಸುಂದರ್‌ದೇ ವ್ ಗ್ರಾಮದ ಬುಡಕಟ್ಟು ಸಮುದಾಯದ ತಾರಾಬಾಯಿ  ಈ ಕೃತ್ಯ ಎಸಗಿದ ಮಹಿಳೆಯಾಗಿದ್ದು, ಈಕೆಗೆ ಡಿಸೆಂಬರ್ 22ರಂದು ಜನಿಸಿದ್ದ ಹೆಣ್ಣು ಮಗುವಿಗೆ ಎರಡೂ ಕೈಗಳಲ್ಲಿ ತಲಾ ಆರು ಬೆರಳು ಮತ್ತು ಎರಡೂ ಕಾಲುಗಳಲ್ಲಿ ತಲಾ ಆರು ಬೆರಳನ್ನು ಹೊಂದಿತ್ತು ಕಾಲಲ್ಲಿ ಹೆಚ್ಚುವರಿ ಬೆರಳು ಇರುವುದು ಅವಲಕ್ಷಣ ಮತ್ತು ಇದರಿಂದ ಹೆಣ್ಣು ಮಗುವಿಗೆ ವಿವಾಹವಾಗಲು ಅಡ್ಡಿಯಾಗಬಹುದು ಎಂಬ ಆತಂಕದಿಂದ ಮಹಿಳೆ ಕುಡುಗೋಲಿನಿಂದ ಮಗುವಿನ ಕೈ ಮತ್ತು ಕಾಲಲ್ಲಿದ್ದ ಹೆಚ್ಚುವರಿ ಬೆರಳನ್ನು ಕತ್ತರಿಸಿದ್ದಾಳೆ.


ಇದರಿಂದ ಮಗುವಿಗೆ ತೀವ್ರರಕ್ತಸ್ರಾವವಾದ ಕಾರಣ  ಮಗು ಮೃತಪಟ್ಟಿದೆ. ಆದರೆ ಎರಡು ದಿನಗಳ ನಂತರ ಈ ವಿಚಾರ ಅಧಿಕಾರಿಗಳಿಗೆ ತಿಳಿದುಬಂದ ಹಿನ್ನಲೆಯಲ್ಲಿ  ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಜಾರಕಿಹೊಳಿ ಬಿಜೆಪಿಯತ್ತ?