Select Your Language

Notifications

webdunia
webdunia
webdunia
webdunia

Delhi Metroದಲ್ಲಿ ಮಗು ಬಿತ್ತೆಂದು ಗಲಾಟೆ ಮಾಡಿದ ಕುಟುಂಬ: ಮಗು ನಿಜವಾಗಿ ಎಲ್ಲಿತ್ತು ವಿಡಿಯೋ ನೋಡಿ

Metro

Krishnaveni K

ನವದೆಹಲಿ , ಭಾನುವಾರ, 13 ಏಪ್ರಿಲ್ 2025 (09:55 IST)
ನವದೆಹಲಿ: ಮಗು ಬಿದ್ದೋಯ್ತು ಎಂದು ಹೆತ್ತಮ್ಮ ಹಾಗೂ ಪರಿವಾರದವರು ದೆಹಲಿ ಮೆಟ್ರೋದಲ್ಲಿ ಗಲಾಟೆ ಎಬ್ಬಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಸಲಿಗೆ ಮಗು ಎಲ್ಲಿತ್ತು ಇಲ್ಲಿದೆ ನೋಡಿ ಅಸಲಿ ಕಹಾನಿ.

ದೆಹಲಿ ಮೆಟ್ರೋದಲ್ಲಿ ನಡೆದ ಘಟನೆ ಇದಾಗಿದೆ. ಅಮ್ಮ, ಮಗು ಸೇರಿದಂತೆ ಇಡೀ ಪರಿವಾರವೇ ಮೆಟ್ರೋ ಏರುತ್ತದೆ. ಆದರೆ ರೈಲು ಚಲಿಸಲು ಆರಂಭಿಸಿದಾಗ ಮಗು ತಮ್ಮ ಜೊತೆಗಿಲ್ಲ ಎನ್ನುವುದು ಪರಿವಾರದವರಿಗೆ ಅರಿವಾಗಿದೆ.

ತಕ್ಷಣವೇ ಮೆಟ್ರೋದಲ್ಲಿ ದೊಡ್ಡ ಗಲಾಟೆಯನ್ನೇ ಎಬ್ಬಿಸುತ್ತಾರೆ. ನಮ್ಮ ಮಗು ಹಳಿಗೆ ಬಿದ್ದು ಹೋಗಿದೆ ಎಂದು ಅಮ್ಮ ಸೇರಿದಂತೆ ಇಡೀ ಕುಟುಂಬದವರು ಮೆಟ್ರೋ ಪೂರ್ತಿ ಓಡಾಡಿ ದಾಂಧಲೆ ಎಬ್ಬಿಸುತ್ತಾರೆ.

ಕೊನೆಗೆ ಮೆಟ್ರೋ ನಿಂತು ಮಗುವಿಗಾಗಿ ಹುಡುಕಾಡಿದಾಗ ಮಗು ಫ್ಲ್ಯಾಟ್ ಫಾರಂನಲ್ಲಿಯೇ ಸೀಟ್ ನಲ್ಲಿ ಕೂತಿರುತ್ತದೆ. ಮಗುವನ್ನು ಬಿಟ್ಟು ಪರಿವಾರದವರು ಮೆಟ್ರೋ ರೈಲು ಏರಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 
 
 
 
 
 
 
 
 
 
 
 
 
 
 

A post shared by Real Delhi (@real_delhi_)


Share this Story:

Follow Webdunia kannada

ಮುಂದಿನ ಸುದ್ದಿ

ಜಾತಿಗಣತಿಗೆ ಯಾರೂ ಮನೆಗೆ ಬಂದೇ ಇಲ್ಲ, ಸಮೀಕ್ಷೆ ಹೇಗಾಯ್ತು