Select Your Language

Notifications

webdunia
webdunia
webdunia
webdunia

ನಿರ್ಭಯಾ ರೇಪಿಸ್ಟ್ ಗಳ ನಾಟಕಕ್ಕೆ ಇನ್ನು ಒಂದೇ ವಾರ ಅವಕಾಶ

ನಿರ್ಭಯಾ ರೇಪಿಸ್ಟ್ ಗಳ ನಾಟಕಕ್ಕೆ ಇನ್ನು ಒಂದೇ ವಾರ ಅವಕಾಶ
ನವದೆಹಲಿ , ಬುಧವಾರ, 5 ಫೆಬ್ರವರಿ 2020 (16:17 IST)
ನವದೆಹಲಿ: ಗಲ್ಲು ಶಿಕ್ಷೆ ತಪ್ಪಿಸಲು ಕಾನೂನಿನ ನೆಪ ಮಾಡುತ್ತಿರುವ ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳಿಗೆ ದೆಹಲಿ ಹೈಕೋರ್ಟ್ ತಕ್ಕ ಶಾಸ್ತಿ ಮಾಡಿದೆ. ಇನ್ನು ಒಂದೇ ವಾರದಲ್ಲಿ ಎಲ್ಲಾ ಲಭ್ಯ ಕಾನೂನು ಅವಕಾಶಗಳನ್ನು ಬಳಸಿಕೊಳ್ಳಬೇಕೆಂದು ಆದೇಶಿಸಿದೆ.


ನಿರ್ಭಯಾ ರೇಪಿಸ್ಟ್ ಗಳಿಗೆ ಯಾವಾಗ ಗಲ್ಲು ಶಿಕ್ಷೆ ಜಾರಿ ಮಾಡಬೇಕೆಂಬ ಕುರಿತಾಗಿ ದೆಹಲಿ ಹೈ ಕೋರ್ಟ್ ವಿಚಾರಣೆ ನಡೆಸಿ ಇಂದು ತೀರ್ಪು ಹೊರಹಾಕಿದೆ. ಅದರಂತೆ ಎಲ್ಲಾ ನಾಲ್ವರು ಆರೋಪಿಗಳನ್ನೂ ಜತೆಯಾಗಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಇವರು ಯಾವುದೇ ರೀತಿಯ ಮೇಲ್ಮನವಿ ಸಲ್ಲಿಸುವುದಿದ್ದರೂ ಏಳು ದಿನಗಳೊಳಗಾಗಿ ಸಲ್ಲಿಸಬೇಕು. ಇದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಹೈ ಕೋರ್ಟ್ ಆದೇಶಿಸಿದೆ.

ಅದಾದ ಬಳಿಕ ನಿರ್ದಿಷ್ಟ ದಿನಾಂಕವನ್ನು ಕೋರ್ಟ್ ನಿಗದಿಪಡಿಸಲಿದ್ದು, ಆ ದಿನ ನಾಲ್ವರೂ ಆರೋಪಿಗಳಿಗೆ ಶಿಕ್ಷೆ ಜಾರಿಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ನುಡಿ ಹಬ್ಬದ ಮೊದಲ ದಿನದ ಹೈಲೈಟ್ಸ್