Publish Date: Mon, 03 Feb 2020 (10:55 IST)
Updated Date: Mon, 03 Feb 2020 (10:57 IST)
ನವದೆಹಲಿ: ಒಳಚರಂಡಿ ಸ್ವಚ್ಛತೆಗೊಳಿಸಲು ಇನ್ನು ಮುಂದೆ ಮಾನವ ಸಹಾಯ ಪಡೆಯುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಘೋಷಿಸಿದ ಬೆನ್ನಲ್ಲೇ ದೆಹಲಿಯಲ್ಲಿ ಕಾರ್ಮಿಕನೊಬ್ಬ ಇದೇ ಕೆಲಸ ಮಾಡುವಾಗ ಸಾವನ್ನಪ್ಪಿದ ಘಟನೆ ನಡೆದಿದೆ.
ಪೂರ್ವ ದೆಹಲಿಯಲ್ಲಿ ಒಳಚರಂಡಿ ಸ್ವಚ್ಛತಾ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಪೈಕಿ ರವಿ ಎಂಬಾತ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡಿದ್ದಾನೆ. ವಿಷಕಾರಿ ಅನಿಲ ಸೇವಿಸಿ ಈತ ಮೃತಪಟ್ಟಿದ್ದಾನೆ ಎಂದು ಗೊತ್ತಾಗಿದೆ. ಇದೀಗ ಈ ಕೆಲಸಕ್ಕೆ ಬಳಸಿಕೊಂಡ ಗುತ್ತಿಗೆದಾರರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.