Select Your Language

Notifications

webdunia
webdunia
webdunia
webdunia

ಗಲ್ಲು ತಪ್ಪಿಸಲು ನಿರ್ಭಯಾ ಅಪರಾಧಿಗಳಿಂದ ದಿನಕ್ಕೊಂದು ನಾಟಕ

ಗಲ್ಲು ತಪ್ಪಿಸಲು ನಿರ್ಭಯಾ ಅಪರಾಧಿಗಳಿಂದ ದಿನಕ್ಕೊಂದು ನಾಟಕ
ನವದೆಹಲಿ , ಬುಧವಾರ, 29 ಜನವರಿ 2020 (09:26 IST)
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿಗಳಿಗೆ ಗಲ್ಲು ಶಿಕ್ಷೆ ದಿನ ಸಮೀಪಿಸುತ್ತಿದ್ದಂತೇ ಇದನ್ನು ಮುಂದೂಡಲು ದಿನಕ್ಕೊಂದು ನಾಟಕವಾಡುತ್ತಿದ್ದಾರೆ.


ರಾಷ್ಟ್ರಪತಿ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಪರಾಧಿ ಮುಖೇಶ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಗಿದು ಇಂದು ತೀರ್ಪು ಹೊರಬೀಳಲಿದೆ. ಆದರೆ ವಿಚಾರಣೆ ವೇಳೆ ನನ್ನ ಮೇಲೆ ತಿಹಾರ್ ಜೈಲ್ ನಲ್ಲಿ ಲೈಂಗಿಕ ಕಿರುಕುಳ ನಡೆದಿತ್ತು ಎಂದು ಹೊಸ ವರಾತ ತೆಗೆದಿದ್ದ.

ಇದರ ಇನ್ನೊಬ್ಬ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ಈ ಅರ್ಜಿಯನ್ನೂ ವಿಚಾರಣೆಗೊಳಪಡಿಸಲಿದೆ. ಇನ್ನೊಬ್ಬ ಅಪರಾಧಿ ಕ್ಯುರೇಟಿವ್ ಅರ್ಜಿ ಸಲ್ಲಿಸುವುದು ಬಾಕಿಯಿದೆ. ಬಹುಶಃ  ಈ ಪ್ರಕರಣದ ವಿಚಾರಣೆ ಮುಗಿಯಲು ಮತ್ತಷ್ಟು ಸಮಯ ಬೇಕಾಗಬಹುದು. ಇದರಿಂದ ಗಲ್ಲು ಶಿಕ್ಷೆ ದಿನಾಂಕ ಮತ್ತಷ್ಟು ಮುಂದೂಡಬಹುದು ಎಂಬ ಲೆಕ್ಕಾಚಾರ ಅಪರಾಧಿಗಳದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಚಡ್ಡಿ ವಿಚಾರಕ್ಕೆ ರೇವಣ್ಣನ ಮೇಲೆ ಕಿಡಿಕಾರಿದ ವಿಧಾನಪರಿಷತ್ ಸದಸ್ಯ