Publish Date: Wed, 05 Feb 2020 (09:34 IST)
Updated Date: Wed, 05 Feb 2020 (09:36 IST)
ನವದೆಹಲಿ: ಲೇಟಾಗಿ ಎದ್ದಿದ್ದಕ್ಕೆ ಟಾಂಗ್ ಕೊಟ್ಟಳು ಎಂಬ ಕಾರಣಕ್ಕೆ ಪತಿರಾಯನೊಬ್ಬ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
45 ವರ್ಷದ ಫಝರುದ್ದೀನ್ ಎಂಬಾತನನ್ನು ಈ ಸಂಬಂಧ ಬಂಧಿಸಲಾಗಿದೆ. ದೆಹಲಿಯಲ್ಲಿರುವ ಪತ್ನಿಯ ಸಹೋದರಿ ಮನೆಗೆ ಬಂದಿದ್ದ ಫಝರುದ್ದೀನ್ ಏಳುವಾಗ ಲೇಟಾಗಿದ್ದಕ್ಕೆ ಪತ್ನಿ ಆಕೆಯ ಸಹೋದರಿಯ ಎದುರೇ ತಮಾಷೆ ಮಾಡಿದ್ದಳು.
ಇದೇ ಸಿಟ್ಟಿನಲ್ಲಿ ಪತ್ನಿ ಜತೆ ಜಗಳವಾಡಿದ್ದ ಫಝರುದ್ದೀನ್ ಬಳಿಕ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ದಂಪತಿಗೆ ಮೂವರು ಮಕ್ಕಳೂ ಇದ್ದಾರೆ.