ಲಕ್ನೋ: ಬಿಸಿಯೂಟದ ಪಾತ್ರೆಗೆ ಬಿದ್ದ ಮೂರು ವರ್ಷದ ಬಾಲಕಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.
									
										
								
																	
ಆಗಷ್ಟೇ ಬಿಸಿಯೂಟ ತಯಾರಿಸಲಾಗಿತ್ತು. ಹೀಗಾಗಿ ಅಕಸ್ಮಾತ್ತಾಗಿ ಬಿಸಿ ಪಾತ್ರೆಗೆ ಬಿದ್ದ ಬಾಲಕಿ ತೀವ್ರ ಸುಟ್ಟ ಗಾಯಗಳಿಂದಾಗಿ ಸಾವನ್ನಪ್ಪಿದ್ದಾಳೆ. ಮೂರು ವರ್ಷದ ಬಾಲಕಿ ಅಂಗನವಾಡಿ ವಿದ್ಯಾರ್ಥಿನಿಯಾಗಿದ್ದಳು ಎನ್ನಲಾಗಿದೆ.
									
			
			 
 			
 
 			
			                     
							
							
			        							
								
																	ಘಟನೆ ಬಗ್ಗೆ ಮಾಧ‍್ಯಮಗಳ ಮುಂದೆ ಅಳಲು ತೋಡಿಕೊಂಡ ಬಾಲಕಿಯ ತಂದೆ, ಈ ವೇಳೆ ಬಿಸಿಯೂಟ ತಯಾರಿಸುತ್ತಿದ್ದ ವ್ಯಕ್ತಿ ಕಿವಿಗೆ ಇಯರ್ ಫೋನ್ ಹಾಕಿಕೊಂಡಿದ್ದ. ಹೀಗಾಗಿ ಬಾಲಕಿ ಬಿದ್ದಿದ್ದೂ ಗೊತ್ತಾಗಿಲ್ಲ ಎಂದು ಆರೋಪಿಸಿದ್ದಾರೆ.