Select Your Language

Notifications

webdunia
webdunia
webdunia
webdunia

ಕನ್ನಡ ನುಡಿ ಹಬ್ಬದ ಮೊದಲ ದಿನದ ಹೈಲೈಟ್ಸ್

ಕನ್ನಡ ನುಡಿ ಹಬ್ಬದ ಮೊದಲ ದಿನದ ಹೈಲೈಟ್ಸ್
ಕಲಬುರಗಿ , ಬುಧವಾರ, 5 ಫೆಬ್ರವರಿ 2020 (16:16 IST)
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ವಿವಿಧ ವೇದಿಕೆಗಳಲ್ಲಿ ವಿಭಿನ್ನ ಸಮಾರಂಭಗಳನ್ನು ಆಯೋಜಿಸಲಾಗಿದ್ದು, ಮೊದಲ ದಿನದ ಡಿಟೈಲ್ಸ್ ಇಲ್ಲಿದೆ. 

ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಇಂದಿನಿಂದ ಫೆ. 7 ರವರೆಗೆ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಯುತ್ತಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಇಂದು ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆಯಲ್ಲಿ “ಕಲ್ಯಾಣ ಕರ್ನಾಟಕ: ಅಂದು-ಇಂದು-ಮುಂದು” ವಿಷಯ ಕುರಿತು ಮೊದಲನೇಯ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ.ಶ್ರೀನಿವಾಸ ಸಿರನೂರನೂರ ಅವರು 371(ಜೆ) ಅನುಷ್ಠಾನ ಮತ್ತು ಅಡಚಣೆಗಳು, ಡಾ. ಅಮರೇಶ ಯತಗಲ್ ಅವರು ಚರಿತ್ರೆ ಮತ್ತು ಪರಂಪರೆ ಕುರಿತು, ಡಾ. ವೀರಣ್ಣ ದಂಡೆ ಅವರು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ  ಹಾಗೂ ಕೆ.ನೀಲಾ ಅವರು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳನ್ನು ಮಂಡಿಸಲಿದ್ದಾರೆ.

ಸಂಜೆ 4.45 ಗಂಟೆಗೆ ಡಾ. ವಸಂತ ಕುಷ್ಟಗಿ ಅವರ ಅಧ್ಯಕ್ಷತೆಯಲ್ಲಿ “ಸಮಕಾಲೀನ ಸಾಹಿತ್ಯ: ಚಹರೆ ಮತ್ತು ಸವಾಲುಗಳು” ವಿಷಯ ಕುರಿತು ಎರಡನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ.ವಸಂತ ಕುಷ್ಟಗಿ ಅವರು ಸಂಶೋಧನಾ ಸಾಹಿತ್ಯ, ಡಾ.ಚಂದ್ರಶೇಖರ ನಂಗಲಿ ಅವರು ಸಾಹಿತ್ಯ ವಿಮರ್ಶೆ, ಡಾ.ಪದ್ಮಿನಿ ನಾಗರಾಜ್ ಅವರು ಸೃಜನಶೀಲ ಸಾಹಿತ್ಯ  ಹಾಗೂ ಪ್ರೊ.ಕಾಶೀನಾಥ ಅಂಬಲಗೆ ಅವರು ಅನುವಾದ ಸಾಹಿತ್ಯವನ್ನು ಮಂಡಿಸಲಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿನ ಡಾ.ಬಿ.ಆರ್. ಅಂಬೇಡ್ಕರ ಸಭಾಂಗಣ (ಸಮಾನಾಂತರ ವೇದಿಕೆ-1) ದಲ್ಲಿ “ಕನ್ನಡ ಭಾಷೆ: ಹೊಸ ತಂತ್ರಜ್ಞಾನ” ವಿಷಯ ಕುರಿತು ಒಂದನೇ ಗೋಷ್ಠಿ ನಡೆಯಲಿದೆ. ಡಾ. ಕರಿಸಿದ್ದಪ್ಪ ಆಶಯನುಡಿಗಳನ್ನಾಡಲಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಅಧ್ಯಕ್ಷತೆ ವಹಿಸುವರು. ಈ ಗೋಷ್ಠಿಯಲ್ಲಿ ಟಿ.ಜಿ. ಶ್ರೀನಿಧಿ ಅವರು ಸಾಹಿತ್ಯದಲ್ಲಿ ತಂತ್ರಜ್ಞಾನದ ಬಳಕೆ, ಜಿ.ಎನ್. ನರಸಿಂಹಮೂರ್ತಿ ಅವರು ಭಾಷಾ ಕಲಿಕೆಯಲ್ಲಿ ತಂತ್ರಜ್ಞಾನ  ಹಾಗೂ ಬೇಳೂರು ಸುದರ್ಶನ ಅವರಿಂದ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು ವಿಷಯಗಳನ್ನು ಮಂಡಿಸಲಿದ್ದಾರೆ.

ಸಂಜೆ 4.45  ಗಂಟೆಗೆ  ಡಾ. ಸತೀಶ ಕುಮಾರ ಹೊಸಮನಿ ಅವರ ಅಧ್ಯಕ್ಷತೆಯಲ್ಲಿ “ಪುಸ್ತಕ ಲೋಕ ವಿಷಯ” ಕುರಿತು ಎರಡನೇ ಗೋಷ್ಠಿ ನಡೆಯಲಿದೆ.  ಈ ಗೋಷ್ಠಿಯಲ್ಲಿ ಪ್ರಕಾಶ ಕಂಬತ್ತಳ್ಳಿ ಅವರು ಪುಸ್ತಕೋದ್ಯಮ-ಸವಾಲುಗಳು, ಡಾ. ಗಾಯತ್ರಿ ನಾವಡ ಅವರು ಲೇಖಕ-ಓದುಗ ಕುರಿತು ಹಾಗೂ ಡಾ. ಬಸವರಾಜ ಡೋಣ್ಣೂರ ಅವರು ಹೊಸ ಓದಿನ ಪ್ರೇರಣೆಗಳು ಕುರಿತ ವಿಷಯಗಳನ್ನು ಮಂಡಲಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಕಣ್ಮನ ಸೆಳೆದ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ