Select Your Language

Notifications

webdunia
webdunia
webdunia
webdunia

ಮೈನಸ್‌ 25 ಡಿಗ್ರಿ ಚಳಿಯಲ್ಲಿ ಮದುವೆಯಾದ ಜೋಡಿ

ಚಳಿಯಲ್ಲಿ ಮದುವೆ

geetha

ಹಿಮಾಚಲ ಪ್ರದೇಶ , ಶನಿವಾರ, 2 ಮಾರ್ಚ್ 2024 (14:40 IST)
ಚಳಿಯಲ್ಲಿ ಮದುವೆ
ಹಿಮಾಚಲ ಪ್ರದೇಶ : ವಧೂವರರ ಬಗ್ಗೆ ವೈಯಕ್ತಿಕ ಮಾಹಿತಿ ತಿಳಿಯದಿದ್ದರೂ ಹಿಮಾಚಲ ಪ್ರವಾಸೋದ್ಯಮ ಇಲಾಖೆ ಈ ವಿವಾಹವನ್ನು ಖಚಿತಪಡಿಸಿದೆ.  ಈ ವಿವಾಹದ ವಿಡಿಯೋವನ್ನು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಗೋ-ಹಿಮಾಚಲ ಶೇರ್‌ ಮಾಡಿದೆ. 
 
ಗುಜರಾತ್‌ ಮೂಲದ ಜೋಡಿಯೊಂದು ಮೈನಸ್‌ 25 ಡಿಗ್ರಿ ಉಷ್ಣಾಂಶವಿರುವ ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯಲ್ಲಿ ವಿವಾಹವಾಗುವ ಮೂಲಕ ಹುಚ್ಚು ಸಾಹಸ ಮಾಡಿದ್ದಾರೆ. ಅನಿಮಲ್‌ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್‌ ಕಪೂರ್‌ ವಿವಾಹವನ್ನು ನೆನೆಪಿಸುವಂಥಾ ಈ ವಿವಾಹದಲ್ಲಿ , ವಧೂವರರು ಬಂದುಮಿತ್ರರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

ದೇಶಾದ್ಯಂತ ಈ ವಿಚಿತ್ರ ವಿವಾಹ ವೈರಲ್‌ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಜೋಡಿಗಳ ಸಾಹಸ ಪ್ರವೃತಿಯನ್ನು ಅಭಿನಂದಿಸಿದ್ದರೆ, ಕೆಲವರು ಕೇವಲ ಪ್ರಚಾರಕ್ಕಾಗಿ ಇಂಥಾ ವಿವಾಹ ನಡೆಯುತ್ತದೆ. ವಿವಾಹದಲ್ಲಿ ಭಾಗವಹಿಸಿದವರ ಪಾಡೇನಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ. 
 

 

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಗೆ ಲೀಗಲ್ ನೋಟಿಸ್ ನೀಡಿದ ನಿತಿನ್ ಗಡ್ಕರಿ