Publish Date: Fri, 02 Feb 2024 (19:00 IST)
Updated Date: Fri, 02 Feb 2024 (18:18 IST)
ಬೆಂಗಳೂರು : ಕಾಂಗ್ರೆಸ್ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುವುದಾಗಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂ ವಿವಾಹ ಕಾಯಿದೆ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಾಗಿ ತಿಳಿಸಿದರು.
ವಿವಾಹ ನೋಂದಣಿ ಪ್ರಕ್ರಿಯೆ ಇನ್ನುಮುಂದೆ ಮತ್ತಷ್ಟು ಸುಲಭವಾಗಲಿದ್ದು, ಈಗ ಆನ್‌ಲೈನ್ ಮುಖಾಂತರವೂ ವಿವಾಹ ನೋಂದಣಿಗೆ ಅವಕಾಶ ನೀಡಲಾಗಿದೆ. ಗ್ರಾಮ ಒನ್, ಕಾವೇರಿ ತಂತ್ರಾಂಶ ಹಾಗೂ ಬಾಪೂಜಿ ಸೇವಾಕೇಂದ್ರಗಳಲ್ಲಿಯೂ ಇನ್ನುಮಂದೆ ವಿವಾಹ ನೋಂದಣಿಗೆ ಅವಕಾಶ ನೀಡಲಾಗಿದೆ.