Select Your Language

Notifications

webdunia
webdunia
webdunia
webdunia

ಯುವ ಮನಸ್ಸುಗಳಿಗೆ ಆಮಿಷ: ಆನ್‌ಲೈನ್ ಮೋಸ ವಿಶ್ವವ್ಯಾಪಿ ಎಂದ ರಾಜನಾಥ್ ಸಿಂಗ್

Online cheating
delhi , ಗುರುವಾರ, 21 ಡಿಸೆಂಬರ್ 2023 (15:18 IST)
ನವದೆಹಲಿಯಲ್ಲಿ ನಡೆದ ಮಾಹಿತಿ ಭದ್ರತಾ ಸಮ್ಮೇಳನದ  'ಗ್ರೌಂಡ್ ಜೀರೊ ಶೃಂಗಸಭೆ-2023 ದಲ್ಲಿ ಮಾತನಾಡುತ್ತಿದ್ದ ಅವರು ಸರ್ಕಾರ ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಕಳವಳವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
 
ಸೈಬರ್ ಅಪರಾಧ ದೇಶಕ್ಕೆ ಬಹುದೊಡ್ಡ ಸಮಸ್ಯೆಯಾಗಿ ತಲೆದೋರಿದ್ದು ವಿವಿಧ ವಿಚ್ಛಿದ್ರಕಾರಕ ಶಕ್ತಿಗಳು ಅಂತರ್ಜಾಲದಲ್ಲಿ ಯುವ ಮನಸ್ಸುಗಳಿಗೆ ಆಮಿಷ ಒಡ್ಡುತ್ತಾರೆ  ಮತ್ತು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಾರೆ ಎಂದು ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
 
ಸೈಬರ್ ಭದ್ರತೆಯನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗ ಸೈಬರ್ ಕ್ರೈಮ್ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರೂಪಾಂತರಿಯ ಉಪಟಳ ಹಿನ್ನೆಲೆ ಖಾಸಗಿ ಶಾಲಾ ಒಕ್ಕೂಟವೂ ಹೈ ಅಲರ್ಟ್