ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು, ಧೂಮಪಾನ-ಮುಕ್ತ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ನೀಡಲ್ಪಡುವ “ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ” 2023 ಪಡೆದುಕೊಂಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಶ್ರೀ ತುಷಾರ್ ಗಿರಿ ನಾಥ್ ಇಂದು ತಿಳಿಸಿದರು. ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಗಾಯಗಳನ್ನು ತಡೆಗಟ್ಟುವ ಮೂಲಕ ಜೀವ ಉಳಿಸಲು ಬದ್ಧವಾಗಿರುವ ವಿಶ್ವದ ಪ್ರಮುಖ 70 ನಗರಗಳ ಜಾಗತಿಕ ಪಾಲುದಾರಿಕೆಯ ಸಹಭಾಗಿತ್ವದಲ್ಲಿ, ಮಾರ್ಚ್ 15, 2023 ರಂದು ಲಂಡನ್‌ನಲ್ಲಿ ನಡೆದ “ಆರೋಗ್ಯಕರ ನಗರಗಳ ಶೃಂಗಸಭೆ”ಯಲ್ಲಿ ಬೆಂಗಳೂರು ನಿಯೋಗಕ್ಕೆ ಪ್ರಶಸ್ತಿ ಲಭಿಸಿದೆ.