Select Your Language

Notifications

webdunia
webdunia
webdunia
webdunia

ಎಲೆಕ್ಷನ್ ಟೈಮಲ್ಲಿ ಸರ್ಕಾರಕ್ಕೆ ಮತ್ತೊಂದು ಟೆನ್ಷನ್

ಎಲೆಕ್ಷನ್ ಟೈಮಲ್ಲಿ ಸರ್ಕಾರಕ್ಕೆ ಮತ್ತೊಂದು ಟೆನ್ಷನ್
bangalore , ಮಂಗಳವಾರ, 7 ಮಾರ್ಚ್ 2023 (13:23 IST)
ಸರ್ಕಾರಿ ನೌಕರರ ನಂತರ ಸಾರಿಗೆ ನೌಕರರು ಮುಷ್ಕರಕ್ಕೆ ನಿರ್ಧಾರ ಮಾಡಿದ್ದು,ಇಂದು ಕಾರ್ಮಿಕ ಇಲಾಖೆಗೆ ಸಾರಿಗೆ ಮುಖಂಡರು ನೋಟಿಸ್ ನೀಡಲಿದ್ದಾರೆ.ಮುಷ್ಕರ ಮಾಡುವ ಮುನ್ನ ಕಾರ್ಮಿಕ ಇಲಾಖೆಗೆ ನೋಟಿಸ್ ನೀಡುವುದು ರೂಲ್ಸ್ .ಮಾರ್ಚ್ 24 ಶುಕ್ರವಾರದಿಂದ ಅನಿರ್ದಿಷ್ಟಾವಧಿ ಸಾರಿಗೆ ಬಂದ್ ಗೆ ಕರೆ ನೀಡಿದ್ದು,ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ.ರಾಜ್ಯದ ನಾಲ್ಕು ನಿಗಮಗಳ ಬಸ್ ಗಳನ್ನು ಬಂದ್ ಮಾಡಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
 
ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯಿಂದ ಹೋರಾಟ ಮಾಡಲು ಸಜ್ಜಾಗಿದ್ದು,ಈಗಾಗಲೇ ಎರಡು ಬಾರಿ ಸಾರಿಗೆ ನೌಕರರ ಒಕ್ಕೂಟ ಮುಷ್ಕರ ಮಾಡಿದೆ.ನಾಲ್ಕು ದಿನ ಫ್ರೀಡಂಪಾರ್ಕ್ ನಲ್ಲಿ ಸಾರಿಗೆ ನೌಕರರ ಪ್ರತಿಭಟನೆ ನಡೆಸಿದ್ದರು.ನಾಳೆಯಿಂದ ಎಲ್ಲಾ ಘಟಕಗಳಲ್ಲಿ ಮುಷ್ಕರದ ಬಗ್ಗೆ ಸಾರಿಗೆ ನೌಕರರು ಜಾಗೃತಿ ಮೂಡಿಸಲಿದ್ದಾರೆ.
 
ಈ ಹಿಂದೆ ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು.6 ನೇ ವೇತನ ಆಯೋಗ ಮಾದರಿಯಲ್ಲಿ ಸಾರಿಗೆ ನೌಕರರಿಗೆ ನೀಡಲು ಹಕ್ಕೊತ್ತಾಯ ಮಾಡಿದ್ದು,ಈ ಹಿಂದೆ ಸಾರಿಗೆ ನೌಕರರಿಗೆ ಭರವಸೆಯನ್ನ ಸರ್ಕಾರ ನೀಡಿತ್ತು.ಬೆಳಗಾವಿ ಅಧಿವೇಶನದಲ್ಲಿ ನೌಕರರು  ಪ್ರತಿಭಟಿಸಿದ್ದರು‌.ವೇತನ ವಿಚಾರವಾಗಿ ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ ಹೀಗಾಗಿ ಇದೀಗ ಮತ್ತೆ ಪ್ರತಿಭಟನೆ ಮಾಡಲು ಸಾರಿಗೆ ನೌಕರರು ಸಜ್ಜಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಪ್ರತಿಭಟನೆ