Select Your Language

Notifications

webdunia
webdunia
webdunia
webdunia

ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಪ್ರತಿಭಟನೆ

ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಪ್ರತಿಭಟನೆ
bangalore , ಮಂಗಳವಾರ, 7 ಮಾರ್ಚ್ 2023 (13:17 IST)
ಏಳಿ ಎದ್ದೇಳಿ ಕನ್ನಡಿಗರೇ ಕನ್ನಡ ಉಳಿಸಿ - ಕನ್ನಡ ಬೆಳೆಸಿ ಎಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ  ಪ್ರತಿಭಟನೆ ಮಾಡಲಾಗಿದೆ,ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಆಪಾಯ ಇದೆ.ಕರ್ನಾಟಕದಲ್ಲಿ ಕನ್ನಡಿಗರ ಪರಿಸ್ಥಿತಿ ಕಣ್ಣೀರಿನ ಕಥೆಯಾಗಿದೆ ಎಂದು ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದ್ದಾರೆ.
 
ಕನ್ನಡಿಗರಿಗೆ ಉದ್ಯೋಗವಿಲ್ಲ, ಪರಭಾಷೆಯವರ ದಾಳಿ ನಡೆಯುತ್ತಿದೆ .ಮರಾಠಿ ಓಟಿಗಾಗಿ ಎಲ್ಲಾ ಪಕ್ಷದವರು ಮರಾಠಿಗಳ ಗುಲಾಮರಾಗಿದ್ದಾರೆ.ಬೆಳಗಾವಿಯಲ್ಲಿ ಕರ್ನಾಟಕದ ರಾಜಕಾರಣಿಗಳೇ ಕನ್ನಡಕ್ಕೆ ಅವಮಾನ ಮಾಡುತ್ತಿದ್ದಾರೆ.ಜಿಲ್ಲೆಗೆ ಒಬ್ಬನಾದರೂ ಕನ್ನಡ ಹೆಸರಿನಲ್ಲಿ ಶಾಸಕರಾಗಬೇಕು.ಬೆಳಗಾವಿಯಲ್ಲಿ ಮರಾಠಿಗರ ಮುಂಡಾಟಿಕೆ, ಬೆಳಗಾವಿ ಮೇಯರ್‌, ಉಪ ಮೇಯರ್ ಕನ್ನಡಕ್ಕೆ, ಕನ್ನಡಿಗರಿಗಾಗಿ ಯಾವುದೇ ರಾಜಕೀಯ ಪಕ್ಷದವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.ಕನ್ನಡ ಅಭಿರದ್ದಿ ಪ್ರಾಧಿಕಾರ ಸತ್ತೋಗಿದೆ.ಸರ್ಕಾರಕ್ಕೆ ಮಂತ್ರಿಗಳಿಗೆ ಕನ್ನಡ ಬೇಡ.ಕನ್ನಡ ಉಳಿಸಿ ಕನ್ನಡ ಬೆಳಸೋಕೋಸ್ಕರ ಜೈಲಿಗೆ ಹೋಗೋಕೂ ಸೈ.ಕರ್ನಾಟಕ ರಾಜ್ಯದ ಆಡಳಿತ ನಡೆಸುವವರು ಹಿಂದಿವಾಲಗಳು.ಕರ್ನಾಟಕದ ಬಹುತೇಕ ಪಕ್ಷಗಳು ಕೇಂದ್ರ ಸರ್ಕಾರದ ಗುಲಾಮರಾಗಿದ್ದಾರೆ.ಶಾಸನ ಸಭೆಯಲ್ಲಿ ಕನ್ನಡವನ್ನು ಕೇಳುವವರಿಲ್ಲ,ಬೆಳಗಾವಿಯಲ್ಲಿ ಮರಾಠಿಗರ ಓಟಿಗಾಗಿ ಎಲ್ಲಾ ಪಕ್ಷದವರು ಪೈಪೋಟಿ, ಮರಾಠಿ ಮೇಯರ್, ಉಪಮೇಯರ್' ಬಗ್ಗೆ ಶಾಸನ ಸಭೆಯಲ್ಲಿ ಒಂದು ಚಕಾರ ಎತ್ತಲಿಲ್ಲ. ಸಭೆ ಹೊಗಳು ಭಟ್ಟರ ಸಭೆಯಾಗಿದೆ.ಕರ್ನಾಟಕದಲ್ಲಿ ಚುನಾವಣೆ ಹಣವಂತರ ಪಾಲಾಗಿದೆ.ಹೆಲಿಕ್ಯಾಪ್ಟರ್ ರಾಜಕಾರಣ, ಆಕಾಶದಲ್ಲೇ ರಾಜಕಾರಣಿಗಳ ಓಡಾಟ,ಹಿಂದುಳಿದ ಗಡಿ ಪ್ರದೇಶ ಚಾಮರಾಜನಗರ ಸೇರಿದಂತೆ ಗಡಿ ನಾಡನ್ನು ಸಂಪೂರ್ಣ ಮರೆತಿದ್ದಾರೆ ಎಂದು ಕರ್ನಾಟಕ ಸರ್ಕಾರದ ವಿರುದ್ಧ  ವಾಟಾಳ್ ನಾಗರಾಜ್ ಸಿಡಿದೆದ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಣ್ಣ ತಾಗಬಾರದೆಂದು ಇಡೀ ಮಸೀದಿಯನ್ನು ಟಾರ್ಪಲ್ನಿಂದ ಮುಚ್ಚಿದ್ರು