Select Your Language

Notifications

webdunia
webdunia
webdunia
webdunia

ಜಾಗತಿಕ ಉಗ್ರರ ಪಟ್ಟಿಗೆ ಅಬ್ದುಲ್ ರೆಹಮಾನ್

ಜಾಗತಿಕ ಉಗ್ರರ ಪಟ್ಟಿಗೆ ಅಬ್ದುಲ್ ರೆಹಮಾನ್
dehali , ಮಂಗಳವಾರ, 17 ಜನವರಿ 2023 (18:04 IST)
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 2008ರ ಮುಂಬೈ ದಾಳಿ ರೂವಾರಿಗಳಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು `ಜಾಗತಿಕ ಉಗ್ರ’ರ ಪಟ್ಟಿಗೆ ಸೇರಿಸಿದೆ. 2023ರ ಜನವರಿ 16ರಂದು ಭದ್ರತಾ ಮಂಡಳಿಯ ಸಮಿತಿಯು 1267 (1999), 1989 (2011) ಮತ್ತು 2253 (2015) ISIL ನಿರ್ಣಯಗಳಿಗೆ ಸಂಬಂಧಿಸಿ, ಅಲ್-ಖೈದಾ ಮತ್ತು ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಅನುಮೋದಿಸಿತು. ಭದ್ರತಾ ಮಂಡಳಿಯ ನಿರ್ಣಯ 2610 (2021)ರಲ್ಲಿರುವಂತೆ ಉಗ್ರರ ಸ್ವತ್ತುಗಳನ್ನು ಮುಟ್ಟಗೋಲು ಹಾಕಿಕೊಂಡಿತ್ತು. ಅಲ್ಲದೇ ಪ್ರಯಾಣ ನಿಷೇಧ, ಶಸ್ತ್ರಾಸ್ತ್ರ ಸಾಗಣೆ ನಿರ್ಬಂಧಕ್ಕೆ ಸೂಚಿಸಿದೆ ಎಂದು ನಿರ್ಣಯದಲ್ಲಿ ತಿಳಿಸಿದೆ. ಮಕ್ಕಿ ಲಷ್ಕರ್-ಎ-ತೈಬಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ನ ಸಂಬಂಧಿ. 2020ರಲ್ಲಿ ಈತನನ್ನು ಜಾಗತಿಕ ಉಗ್ರನಾಗಿ ಘೋಷಿಸಬೇಕು ಎಂದು ಭಾರತ ಮಾಡಿದ್ದ ಪ್ರಯತ್ನಗಳಿಗೆ ಚೀನಾ ಅಡ್ಡಗಾಲು ಹಾಕಿತ್ತು. ಈ ಪ್ರಸ್ತಾಪ ತಳ್ಳಿಹಾಕಲು ಸಹಾಯ ಮಾಡಿದ್ದ ಚೀನಾವನ್ನು 2022ರ ಜೂನ್‌ನಲ್ಲಿ ಭಾರತ ತರಾಟೆಗೆ ತೆಗೆದುಕೊಂಡಿತ್ತು. ಅಬ್ದುಲ್ ರೆಹಮಾನ್ ಮಕ್ಕಿ ಮೋಸ್ಟ್ ವಾಂಟೆಡ್ ಉಗ್ರ. ಈತ ಹಿಂಸಾಚಾರಕ್ಕೆ ಮುಸ್ಲಿಂ ಯುವಕರನ್ನ ಪ್ರೇರೇಪಿಸುವುದು, ಹಣ ಸಹಾಯ ಮಾಡುವುದು, ಜಮ್ಮು- ಕಾಶ್ಮೀರದಲ್ಲಿ ಉಗ್ರ ದಾಳಿಗಳನ್ನು ಸಂಘಟಿಸುವುದರಲ್ಲಿ ನಿರತನಾಗಿದ್ದಾನೆ. ಲಷ್ಕರ್ ಸಂಘಟನೆಯಲ್ಲೂ ಹಲವು ಸ್ಥಾನಗಳನ್ನ ನಿಭಾಯಿಸಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜಯ್ ಭಂಡಾರಿ ಹಸ್ತಾಂತರಕ್ಕೆ ಅಸ್ತು