Select Your Language

Notifications

webdunia
webdunia
webdunia
webdunia

ಭೀಕರ ರಸ್ತೆ ಅಪಘಾತದಲ್ಲಿ 19 ಮಂದಿ ಬಲಿ!

ಭೀಕರ ರಸ್ತೆ ಅಪಘಾತದಲ್ಲಿ 19 ಮಂದಿ ಬಲಿ!
ಬೀಜಿಂಗ್ , ಸೋಮವಾರ, 9 ಜನವರಿ 2023 (06:48 IST)
ಬೀಜಿಂಗ್ : ದಟ್ಟ ಮಂಜಿನ ಪರಿಣಾಮವಾಗಿ ಪೂರ್ವ ಚೀನಾದ ಜಿಯಾಂಗ್ಕ್ಸಿ ಪ್ರಾಂತ್ಯದಲ್ಲಿ ಭಾನುವಾರ ಭೀಕರ ಅಪಘಾತ ಸಂಭವಿಸಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 20 ಜನರು ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಹೊರಟಿದ್ದ ಮೆರವಣಿಗೆಗೆ ಟ್ರಕ್ ಡಿಕ್ಕಿ ಹೊಡೆದಿದೆ. ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ 19 ಮಂದಿ ಮೃತಪಟ್ಟಿದ್ದಾರೆ. ಗಾಂಗ್ ಎಂಬ ಸ್ಥಳೀಯ ವ್ಯಕ್ತಿಯೊಬ್ಬರ ಪತ್ನಿಯ ಅಂತ್ಯಕ್ರಿಯೆಗೆ ಮೆರವಣಿಗೆ ಸಾಗುತ್ತಿತ್ತು.

ರಸ್ತೆಯಲ್ಲಿ ಮುಂದೆ ಮೆರವಣಿಗೆ ವಾಹನ ಸಾಗಿತ್ತು. ವಾಹನವನ್ನು ಹಿಂಬಾಲಿಸಿ ಜನರು ಸಾಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್ಗೆ ಜನರ ಗುಂಪಿಗೆ ನುಗ್ಗಿದೆ. ದಟ್ಟ ಮಂಜಿನ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಲ್ಲಾಳಿಗಳಿಂದ ಆಡಳಿತ ನಡೆಯುತ್ತಿದೆ-ಮಾಜಿ ಸಿಎಂ H.D ಕುಮಾರಸ್ವಾಮಿ