Select Your Language

Notifications

webdunia
webdunia
webdunia
webdunia

ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು
ಚೆನ್ನೈ , ಮಂಗಳವಾರ, 3 ಜನವರಿ 2023 (12:35 IST)
ಚೆನ್ನೈ : ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ತಿರುಚ್ಚಿ- ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಒಂದೇ ಬಾರಿಗೆ 6 ವಾಹನಗಳು ಅಪಘಾತಕ್ಕೀಡಾಗಿದೆ. 2 ಖಾಸಗಿ ಬಸ್ಗಳು, 2 ಲಾರಿಗಳು ಹಾಗೂ 2 ಕಾರುಗಳ ರಾಶಿ ಬಿದ್ದಿವೆ. ಇನ್ನೂ ಮೃತರ ಗುರುತನ್ನು ಪತ್ತೆ ಹಚ್ಚಿಲ್ಲ. ಅಪಘಾತ ನಡೆದಾಗ  ಮೃತರೆಲ್ಲರೂ ಕಾರಿನಲ್ಲಿದ್ದರು.

ಘಟನೆಗೆ ಸಂಬಂಧಿಸಿ ವೇಪ್ಪೂರು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನಿಂದ ಮೃತದೇಹಗಳನ್ನು ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. 

 

Share this Story:

Follow Webdunia kannada

ಮುಂದಿನ ಸುದ್ದಿ

ಗೌರವ ಡಾಕ್ಟರೇಟ್ ತಿರಸ್ಕರಿಸಿದ್ದ ಕಾಯಕಯೋಗಿ : ನಿರಾಣಿ ಸಂತಾಪ