Select Your Language

Notifications

webdunia
webdunia
webdunia
webdunia

ಭೀಕರ ಹೆಲಿಕಾಪ್ಟರ್ ದುರಂತ : ನಾಲ್ವರು ಸಾವು, ಮೂವರಿಗೆ ಗಾಯ

ಭೀಕರ ಹೆಲಿಕಾಪ್ಟರ್ ದುರಂತ : ನಾಲ್ವರು ಸಾವು, ಮೂವರಿಗೆ ಗಾಯ
ಆಸ್ಟ್ರೇಲಿಯಾ , ಸೋಮವಾರ, 2 ಜನವರಿ 2023 (16:24 IST)
ಕ್ಯಾನ್ಬೆರಾ : ಪ್ರವಾಸಿಗರ ಹಾಟ್ಸ್ಪಾಟ್ ಎಂದೇ ಖ್ಯಾತಿಯಾಗಿರುವ ಆಸ್ಟ್ರೇಲಿಯಾದ ಗೋಲ್ಡ್ಕೋಸ್ಟ್ ಬೀಚ್ನ ಸೀ ವರ್ಲ್ಡ್ ಥೀಮ್ ಪಾರ್ಕ್ ಬಳಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಡಲತೀರದ ಪ್ರದೇಶದಲ್ಲಿ ಎರಡು ಹೆಲಿಕಾಪ್ಟರ್ಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಒಂದು ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ಮತ್ತೊಂದು ಹೆಲಿಕಾಪ್ಟರ್ ಸಂಪೂರ್ಣ ಛಿದ್ರ-ಛಿದ್ರವಾಗಿ, ಅವಶೇಷಗಳು ಮರಳಿನ ದಂಡೆಯ ಮೇಲೆ ಬಿದ್ದಿದೆ. 

ಹೆಲಿಕಾಪ್ಟರ್ ಡಿಕ್ಕಿಯಾಗಿ 4 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಕ್ವೀನ್ಸ್ಲ್ಯಾಂಡ್ ರಾಜ್ಯ ಪೊಲೀಸ್ ಕಾರ್ಯನಿರ್ವಾಹಕ ಇನ್ಸ್ಪೆಕ್ಟರ್ ಗ್ಯಾರಿ ವೊರೆಲ್ ವಿವರಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಕೋಲಾರವನ್ನ ಗೆದ್ದೇ ಗೆಲ್ಲುತ್ತೇವೆ : ಮುನಿರತ್ನ