Publish Date: Sun, 08 Jan 2023 (20:31 IST)
Updated Date: Sun, 08 Jan 2023 (20:34 IST)
ಎರಡನೇ ಹಂತದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪ್ರವಾಸಕ್ಕೆ ಉತ್ತಮ ವಾತಾವರಣವಿದೆ ಎಂದು ಮಾಜಿ ಸಿಎಂ H.D ಕುಮಾರಸ್ವಾಮಿ ಹೇಳಿದ್ದಾರೆ. ಬೀದರ್ನಲ್ಲಿ ಮಾತನಾಡಿದ ಅವರು, ಪಂಚರತ್ನ ಯಾತ್ರೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜನರು ತಮ್ಮ-ತಮ್ಮ ಸಮಸ್ಯೆಗಳನ್ನು ಎಳೆ-ಎಳೆಯಾಗಿ ಮನಬಿಚ್ಚಿ ಹೇಳುತ್ತಿದ್ದಾರೆ. ಭಾರತದ ನಿಜವಾದ ಚಿತ್ರಣದ ಬಗ್ಗೆ ಯಾವ ರಾಜಕೀಯ ಪಕ್ಷಗಳು ಮಾತನಾಡುತ್ತಿಲ್ಲ. ಈ ಕೆಲಸವನ್ನು JDS ಮಾಡುತ್ತಿದೆ ಎಂದು ಹೇಳಿದರು. ಸ್ಯಾಂಟ್ರೋ ರವಿ ಬಗ್ಗೆ ಯಾರು ಮಾತನಾಡಬೇಡಿ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಹೆಚ್ಡಿಕೆ ತಿರುಗೇಟು ನೀಡಿದರು. ವರ್ಗಾವಣೆ ಬಗ್ಗೆ ಸ್ಯಾಂಟ್ರೋ ರವಿ S.T ಸೋಮಶೇಖರ್ ಜೊತೆ ಮಾತನಾಡಿದ ವಿಡಿಯೋ ಹೊರಗೆ ಬಂದಿದೆ. ಸರ್ಕಾರದ ಆಡಳಿತವನ್ನು ದಲ್ಲಾಳಿಗಳು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ರು.