Publish Date: Sun, 08 Jan 2023 (20:28 IST)
Updated Date: Sun, 08 Jan 2023 (20:31 IST)
ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ನಡೆದಿತ್ತು. ಈ ಘಟನೆಯನ್ನು ಶ್ರಿರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಹಳ ಹತ್ತಿರದಿಂದ ಜೀವಕ್ಕೆ ಅಪಾಯ ಆಗುವುದು ತಪ್ಪಿದೆ. ರಾಮನ, ಸಂಘಟನೆಯ ಕೃಪೆಯಿಂದ ಇಬ್ಬರಿಗೂ ಯಾವುದೇ ರೀತಿಯ ಅಪಾಯವಿಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ರು. ನಮ್ಮ ಸಂಘಟನೆಯನ್ನು ತಡೆಯುವ, ಹಿಂದುತ್ವ ಕಾರ್ಯ ನಿಲ್ಲಿಸುವ ಕಾರ್ಯ ಮಾಡಿದ್ರೆ, ನಿಮ್ಮ ಆಟ ನಿಮಗೇ ತಿರುಗೇಟು ಆಗುತ್ತೆ ಎಂದು ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಇಲಾಖೆ ತನಿಖೆ ಮಾಡಿ ಕೂಡಲೇ ಫೈರಿಂಗ್ ಮಾಡಿದವರನ್ನು ಬಂಧಿಸಬೇಕೆಂದು ಆಗ್ರಹ ಮಾಡಿದ್ರು. ಹಿಂದೂ ಕಾರ್ಯಕರ್ತರ ಮೇಲೆ ಮೇಲಿಂದ ಮೇಲೆ ನಡೆಯುವ ಹಲ್ಲೆ ಖಂಡನೀಯ. ಈ ರೀತಿಯ ಆಟ ಇನ್ನು ಮೇಲೆ ನಡೆಯಲ್ಲ ಎಂದು ತಿಳಿಸಿದರು.