Select Your Language

Notifications

webdunia
webdunia
webdunia
webdunia

ಪೊಲೀಸರ ವಿರುದ್ಧ ರವಿ ಪತ್ನಿ ಆಕ್ರೋಶ

Ravi's wife is outraged against the police
mysooru , ಭಾನುವಾರ, 8 ಜನವರಿ 2023 (20:24 IST)
ಸ್ಯಾಂಟ್ರೋ ರವಿಗೆ ರಕ್ಷಣೆ ನೀಡ್ತಿದ್ದಾರಾ ಪೊಲೀಸರು ಎಂಬ ಅನುಮಾನ ಮೂಡ್ತಿದೆ. ಇದಕ್ಕೆ ಕಾರಣ ರವಿ ಪತ್ನಿ ಪೊಲೀಸರ 
ವಿರುದ್ಧ ನೀಡಿದ ಹೇಳಿಕೆ. ಬೆಂಗಳೂರಿನ ಕಾಟನ್​​ಪೇಟೆ ಪೊಲೀಸರ ವಿರುದ್ಧ ರವಿ ಪತ್ನಿ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಟನ್​​ಪೇಟೆ ಪೊಲೀಸರಿಗೆ ಮನುಷ್ಯತ್ವವೇ ಇಲ್ಲ. ಯಾರಾದ್ರೂ ಹಣ ಕೊಡ್ತಾರೆ ಅಂದ್ರೆ ಏನು ಬೇಕಾದ್ರೂ ಮಾಡ್ತಾರೆ ಎಂದು ಆರೋಪಿಸಿದ್ದಾರೆ. ನಮ್ಮ ಮೇಲೆ ಆರೋಪ ಇಲ್ಲದಿದ್ರೂ ಮನೆಗೆ ನುಗ್ಗಿ ನಮ್ಮನ್ನು ಬಂಧಿಸಿದ್ರು. ಪೊಲೀಸ್ ಠಾಣೆಯಲ್ಲಿ ನಮ್ಮನ್ನು ಮಾತನಾಡಲು ಬಿಡದೆ ಜೈಲಿಗೆ ಹಾಕಿದ್ರು. ಇಂತಹ ಪೊಲೀಸರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಅವರು ಆಗ್ರಹ ಮಾಡಿದ್ರು. ದೂರು ನೀಡಿ 6 ದಿನಗಳಾದ್ರೂ ರವಿಯನ್ನ ಯಾಕೆ ಬಂಧಿಸಿಲ್ಲ..? ಪೊಲೀಸರು ಕೂಡಲೆ ಸ್ಯಾಂಟ್ರೋ ರವಿಯನ್ನ ಬಂಧಿಸಬೇಕು ಎಂದು ಸ್ಯಾಂಟ್ರೋ ರವಿ ಪತ್ನಿ ಆಗ್ರಹ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯರಿಗೆ ದುಬಾರಿ ರ್ಯಾಡೋ ವಾಚ್​​!