Select Your Language

Notifications

webdunia
webdunia
webdunia
webdunia

ಯುವತಿಯರಿಗೆ ದುಬಾರಿ ರ್ಯಾಡೋ ವಾಚ್​​!

ಯುವತಿಯರಿಗೆ ದುಬಾರಿ ರ್ಯಾಡೋ ವಾಚ್​​
ರಾಜ್ಯ ರಾಜಕೀಯದಲ್ಲಿ ಸ್ಯಾಂಟ್ರೋ ರವಿ ಸದ್ದು ಜೋರಾಗಿದೆ. ಸ್ಯಾಂಟ್ರೋ ರವಿಯ ಕಹಾನಿ ಬಗೆದಷ್ಟು ಬಯಲಾಗ್ತಿದೆ. ಈತ ಮನೆಗಳನ್ನ ಬಾಡಿಗೆ ಪಡೆದು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ದನಂತೆ. ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗ್ತಿತ್ತಂತೆ. ಮೈಸೂರು, ಬೆಂಗಳೂರು ಸೇರಿ ವಿವಿಧೆಡೆ ಹೈಟೆಕ್ ಮನೆಗಳನ್ನು ಬಾಡಿಗೆ ಪಡೆಯುತ್ತಿದ್ದ ಸ್ಯಾಂಟ್ರೋ‌ ರವಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ದಂಧೆಯಲ್ಲಿದ್ದ ಯುವತಿಯರಿಗೆ ರ್ಯಾಡೋ ವಾಚ್ ಗಿಫ್ಟ್ ನೀಡ್ತಿದ್ದನಂತೆ. 1 ಲಕ್ಷ 80 ಸಾವಿರದ ರ್ಯಾಡೋ ವಾಚ್ ಅನ್ನು ಈತ ಗಿಫ್ಟ್ ನೀಡಿದ್ದಾನೆ. ಪ್ರಭಾವಿ ರಾಜಕಾರಣಿಗಳೇ ಈ ಸ್ಯಾಂಟ್ರೋ ರವಿಯ ಟಾರ್ಗೆಟ್​​ ಆಗಿದ್ದು, ಹಲವು ಸಚಿವರು, ಶಾಸಕರನ್ನ ಸ್ಯಾಂಟ್ರೋ ರವಿ ಭೇಟಿಯಾಗಿದ್ದ. ಇನ್ನು ರಾಯಚೂರು ಸಂಸದ ರಾಜಾ ಅಮರೇಶ್ವರ್​​ ನಾಯ್ಕ್​​​​​​ ಜೊತೆ ಸ್ಯಾಂಟ್ರೋ ರವಿ ಮಾತುಕತೆ ನಡೆಸಿದ್ದ ಎನ್ನಲಾದ ಆಡಿಯೋ ಕೂಡ ಲಭ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಬಳಿ ಸಚಿವರ ಲೇಟರ್ ಹೆಡ್​​ಗಳು ಪತ್ತೆ