Publish Date: Sun, 08 Jan 2023 (19:52 IST)
Updated Date: Sun, 08 Jan 2023 (20:02 IST)
ಮೈಸೂರಿನಲ್ಲಿ ಸ್ಯಾಂಟ್ರೋ ರವಿ ವಿರುದ್ಧ JDS ಪ್ರತಿಭಟನೆಗಿಳಿದೆ. ನಗರ JDS ಮಹಿಳಾ ಘಟಕದಿಂದ ಮೈಸೂರಿನ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ದ ಅಕ್ರೋಶ ಹೊರಹಾಕಿದ್ರು. ಅರೋಪಿ ಸ್ಯಾಂಟ್ರೋ ರವಿ ಬಂಧನಕ್ಕೆ ಅವರು ಒತ್ತಾಯಿಸಿದರು. ಸರ್ಕಾರದಲ್ಲಿ ಶೋಷಿತರಿಗೆ ರಕ್ಷಣೆ ಇಲ್ಲ. BJP ಸರ್ಕಾರ ರೌಡಿ ಶೀಟರ್ಗಳನ್ನು ರಕ್ಷಿಸುತ್ತಿದೆ. ರಾಜ್ಯ ಗೃಹ ಇಲಾಖೆ ಸ್ಯಾಂಟ್ರೋ ರವಿ ರಕ್ಷಣೆಗೆ ನಿಂತಿದೆ ಎಂದು ಅವರು ಆರೋಪಿಸಿದರು. ಈ ಕೂಡಲೇ ಸ್ಯಾಂಟ್ರೋ ರವಿ ಬಂಧಿಸಿ, ಇಲ್ಲದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ರು. ಪಾಲಿಕೆ ಸದಸ್ಯೆ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶಂಕರೇಗೌಡ ಸೇರಿದಂತೆ ಹಲವು JDS ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.