Select Your Language

Notifications

webdunia
webdunia
webdunia
webdunia

ಇಂಜಿನ್ ಸರ್ಕಾರವನ್ನು ಕಿತ್ತೊಗೆಯಬೇಕು-ಡಿಕೆಶಿ

Engine govt should be scrapped
bangalore , ಭಾನುವಾರ, 8 ಜನವರಿ 2023 (18:56 IST)
ರಾಜ್ಯಕ್ಕೆ ದೊಡ್ಡ ಅನ್ಯಾಯ ಆಗ್ತಿದೆ ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಕಿಡಿ ಕಾರಿದ್ದಾರೆ. ಗಣರಾಜೋತ್ಸವಕ್ಕೆ ಕರ್ನಾಟಕ ಟ್ಯಾಬ್ಲೋ ಗೆ ಅವಕಾಶ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ  ಕರ್ನಾಟಕ ಅಂದ್ರೆ ಮೋದಿ ಸರಕಾರಕ್ಕೆ ಗೌರವ ಇಲ್ಲ. ನಾರಾಯಣಗುರು ಟ್ಯಾಬ್ಲೋ ಕಿತ್ತುಹಾಕಿದ ನೋವನ್ನೇ ಇನ್ನೂ ಕಡಿಮೆ ಮಾಡಿಕೊಳ್ಳಲು ಆಗ್ತಿಲ್ಲ. ೨೫-೨೬ ಎಂಪಿಗಳಿದ್ದಾರೆ ಒಂದು ದಿನವೂ ಕರೆದು ಚರ್ಚೆ ಮಾಡಿಲ್ಲ.ಬಿಜೆಪಿಯವರಿಗೆ ಮಾತನಾಡುವ ಶಕ್ತಿಯೂ ಇಲ್ಲ.ಮಹದಾಯಿ ವಿಚಾರದಲ್ಲಿ, ರಾಜ್ಯದ ಸಮಸ್ಯೆಗಳ ವಿಚಾರದಲ್ಲಿ ಡೆಲಿಗೇಷನ್ ಕರೆದುಕೊಂಡು ಹೋಗಿ ಮಾತನಾಡಬಹುದಲ್ಲ. ಆ ಕೆಲಸವು ಆಗಿಲ್ಲ. ಎಸ್.ಸಿ ರಿಸರ್ವೇಷನ್ ಅನ್ನು ೯ ನೇ ಶೆಡ್ಯುಲ್ ನಲ್ಲಿ ಸೇರಿಸೋದಕ್ಕೆ ಆಗ್ತಿಲ್ಲ. ಯಾವ ರೀತಿ ದಲಿತರಿಗೆ ಮೋಸ ಮಾಡ್ತಿದ್ದಾರೆ ಎಂದು ಅರ್ಥ ಆಗ್ತಿದೆ ಈಗ. ಈ ಮೂಲಕ ರಾಜ್ಯಕ್ಕೆ ದೊಡ್ಡ ಅನ್ಯಾಯ ಆಗ್ತಿದೆ, ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಪರ ಸಂಘಟನೆ ತಾಲೂಕು ಅಧ್ಯಕ್ಷನ ಹತ್ಯೆ