Select Your Language

Notifications

webdunia
webdunia
webdunia
webdunia

ನಾ ನಾಯಕಿ ಸಮಾವೇಶ ಮುಂದೂಡಿದ ಕಾಂಗ್ರೆಸ್

Congress postpones Na Nayaki convention
bangalore , ಭಾನುವಾರ, 8 ಜನವರಿ 2023 (19:02 IST)
ಮಹಿಳಾ ಮತದಾರರನ್ನು ಸೆಳಿಯುವ ನಿಟ್ಟಿನಲ್ಲಿ ಕಾಂಗ್ರೆಸ್  ನಾ ನಾಯಕಿ ಸಮಾವೆಶವನ್ನು, ಇದೇ ತಿಂಗಳು 6 ರಂದು ಹಮ್ಮಿಕೊಂಡಿದ್ದು, ಆದರೆ ಕಾರಾಣಾಂತರಗಳಿಂದ ಇದೆ ತಿಂಗಳ ೧೬ಕ್ಕೆ ಮುಂದೂಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ನಗರದಲ್ಲಿ ಮಾತನಾಡಿ  ನಾ ನಾಯಕಿ ಕಾರ್ಯಕ್ರಮ ಮುಂದೂಡಲಾಗಿದೆ.ಇದೆ ತಿಂಗಳ ೧೬ಕ್ಕೆ  ಬೆಂಗಳೂರಿನಲ್ಲಿ ನಡೆಯಲಿದೆ.ರಾಷ್ಟ್ರೀಯ ನಾಯಕರು ಯಾರು ಬರ್ತಾರೆ ಅಂತ ಇವತ್ತು ಗೊತ್ತಾಗಲಿದೆ.ಪ್ರತಿ ಬೂತ್ ನಿಂದ ಮಹಿಳಾ ಕಾರ್ಯಕರ್ತರ ಆಹ್ವಾನ ಮಾಡ್ತಾ ಇದ್ದೇವೆ.ಮಹಿಳೆಯರುಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಸಮಾವೇಶ ಯಶಸ್ವಿ ಮಾಡಲು ನಾನು ಕೂಡ ಜೂಮ್ ಮೀಟಿಂಗ್ ಮಾಡ್ತಾ ಇದ್ದೇನೆ ಎಂದು ತಿಳಿಸಿದರು. ಇನ್ನೂ ಸಮಾವೇಶದ ಮೂಲಕ ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನ ಕರೆತರಬೇಕು ಎಂಬುವುದು ಕೈ ನಾಯಕರ ತಂತ್ರ ಈ ಹಿನ್ನಲೆ  ಸಮಾವೇಶವನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಜಿನ್ ಸರ್ಕಾರವನ್ನು ಕಿತ್ತೊಗೆಯಬೇಕು-ಡಿಕೆಶಿ