Publish Date: Sun, 08 Jan 2023 (18:15 IST)
Updated Date: Sun, 08 Jan 2023 (18:23 IST)
ಕಲಬುರಗಿಯಲ್ಲಿ ರಿಯಲ್ ಎಸ್ಟೇಟ್ ಉದ್ಯೋಗ ಮಾಡುತ್ತಿದ್ದ ಮಹಮ್ಮದ್ ಇಸಾಮುದ್ದೀನ್ಗೆ ಫಯಾಜ್ ಮತ್ತು ಆತನ ಸ್ನೇಹಿತರು ಸೇರಿ ಚಾಕು ಇರಿದಿದ್ದಾರೆ. ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಆತನಿಗೆ ಚಾಕುವಿನಿಂದ ಇರಿಯಲಾಗಿದೆ. ಎರಡು ಗುಂಪುಗಳ ನಡುವೆ ಸಂಧಾನ ಮಾಡಿದ್ದಾನೆ ಎಂಬ ಕಾರಣಕ್ಕಾಗಿ ಆತನಿಗೆ ಚಾಕು ಇರಿಯಲಾಗಿದೆ. ಗಾಯಾಳು ಮಹಮ್ಮದ್ ಇಸಾಮುದ್ದೀನ್ನನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆಯು ಜನವರಿ 4 ರಂದು ಸಂಜೆ ನಾಲ್ಕು ಗಂಟೆ ಸಮಯದಲ್ಲಿ ನಡೆದಿದೆ. ಮಹಮ್ಮದ್ ಇಸಾಮುದ್ದೀನ್ ಎಂಬಾತ ಜಾಗದ ವಿಷಯವಾಗಿ ಎರಡು ಗುಂಪುಗಳನ್ನು ಕರೆಸಿ ಅವರಿಬ್ಬರ ನಡುವೆ ಸಂಧಾನ ಮಾಡಿದ್ದಾನೆ. ಈ ಕುರಿತು ಅಸಮಾಧಾನ ಹೊಂದಿದ್ದ ಫಯಾಜ್ ಆತನ ಸ್ನೇಹಿತರೊಂದಿಗೆ ಕೂಡಿ ಇಸಾಮುದ್ದೀನ್ ಮೇಲೆ ಹಾಡಹಗಲೇ ಚಾಕು ಇರಿದಿದ್ದಾನೆ. ಈ ದೃಶ್ಯ CCTVಯಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.