Select Your Language

Notifications

webdunia
webdunia
webdunia
webdunia

ಏಕಾಏಕಿ ಹೊತ್ತಿ ಉರಿದ ಬೈಕ್​​​

The bike caught fire suddenly
ಹಾಸನ , ಭಾನುವಾರ, 8 ಜನವರಿ 2023 (18:09 IST)
ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಘಟನೆ ಹಾಸನ ತಾಲ್ಲೂಕಿನ, ಕೋರವಂಗಲ ಗೇಟ್ ಬಳಿ ನಡೆದಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು ಬೈಕ್ ಸಂಪೂರ್ಣ ಉರಿದು ಹೋಗಿದೆ. ಜೋಡಿ ಕೃಷ್ಣಾಪುರದ ನಿವಾಸಿ ಚಿದಾನಂದ್ ಎಂಬುವವರಿಗೆ ಸೇರಿದ ಬೈಕ್ ಇದ್ದಾಗಿದ್ದು, ಈತ ಕಡೂರಿನಿಂದ ಜೋಡಿ ಕೃಷ್ಣಾಪುರ ಗ್ರಾಮಕ್ಕೆ ತೆರಳಿತ್ತಿದ್ದ. ಈ ವೇಳೆ ಕೋರವಂಗಲ ಗೇಟ್ ಬಳಿ ಬೈಕ್ ನಿಲ್ಲಿಸಿ ಸಿಹಿ ತಿನಿಸು ತರಲು ಬೇಕರಿಗೆ ಹೋಗಿದ್ದ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೈಕ್ ಹೊತ್ತಿ ಉರಿಯುವುದನ್ನು ಕಂಡು ಬೈಕ್ ಮಾಲೀಕ ಚಿದಾನಂದ್ ಕಣ್ಣಿರಿಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಎಸ್ಕೇಪ್​​