Select Your Language

Notifications

webdunia
webdunia
webdunia
webdunia

ಪ್ರಸಕ್ತ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ ಎಚ್ ಡಿ ಕುಮಾರಸ್ವಾಮಿ ಮತ್ತು ಜಿಟಿ ದೇವೇಗೌಡ

HD Kumaraswamy
bangalore , ಬುಧವಾರ, 26 ಅಕ್ಟೋಬರ್ 2022 (20:06 IST)
ಬೆಂಗಳೂರಿನ ಜೆಡಿಎಸ್  ಪಕ್ಷದ ಕಚೇರಿಯಲ್ಲಿ ಹೆಚ್ ಡಿ ಕುಮಾರಸ್ವಾಮಿಯನ್ನ ಜಿಟಿ ದೇವೆಗೌಡ ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.ಅಲ್ಲದೇ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.ಪ್ರಸಕ್ತ ರಾಜಕಾರಣ, ಪಂಚರತ್ನ ರಥಯಾತ್ರೆ ಬಗ್ಗೆ ಚರ್ಚೆ ನಡೆಸಿದ್ದಾರೆ.
 
ಈ ವೇಳೆ ಜೆಪಿ ಭವನದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ನೆನ್ನೆ ಸಾಯಂಕಾಲದವರೆಗೂ 
ಸೂರ್ಯ ಗ್ರಹಣ ಇತ್ತು, ಮೋಕ್ಷ ಆಗಿದೆ.ನಾಡಿಗೆ ಒಳ್ಳೆಯದು ಆಗಬೇಕು.ಸಿಎಂ ಬೊಮ್ಮಾಯಿಯವರಿಗೂ ಮುಂಜಾನೆ ಅವರ ಮನೆಗೆ ಭೇಟಿ ನೀಡಿ ಸಿಹಿ ತಿನ್ನಿಸಿದ್ದೇನೆ.ರಾಜ್ಯದಲ್ಲಿ ಮಳೆ ಬಂದು ರಸ್ತೆಗಳು,ನಾಲೆಗಳು ಹಾಳಾಗಿವೆ.ಅವೆಲ್ಲವನ್ನೂ ಸರಿ ಪಡಿಸುವ ಶಕ್ತಿ ಚಾಮುಂಡೇಶ್ವರಿ ನೀಡಲಿ ಎಂದು ಸಿಎಂಗೆ ಹಾರೈಸಿದ್ದೇನೆ.ಕುಮಾರಸ್ವಾಮಿಗೂ ಸಿಹಿ ತಿನ್ನಿಸಿ, ಒಳ್ಳೆಯದಿಗಲಿ ಎಂದು ಹಾರೈಸಿದ್ದೇನೆ.ನಾಡಿಗೆ ಒಳ್ಳೆಯದಾಗಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎಲ್ಲರಿಗೂ ಒಳ್ಳೆಯದಾಗಲಿ.ಮರಳಿ ಪಕ್ಷದ ಕಛೇರಿಗೆ ಭೇಟಿ ನೀಡಿದ್ದು ಖುಷಿ ತಂದಿದೆ ಎಂದು ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಎಂಪೈರ್ ಹೋಟೆಲ್ ನಲ್ಲಿ ಅಗ್ನಿ ಅವಘಡ