Publish Date: Thu, 01 Feb 2024 (10:57 IST)
Updated Date: Thu, 01 Feb 2024 (11:05 IST)
ಮುಂಬೈ: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಬಾಲಿವುಡ್ ತಾರೆಯರಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಜ್ಯಾಕೀ ಭಗ್ನಾನಿ ತಮ್ಮ ಮದುವೆ ಸ್ಥಳವನ್ನೇ ಬದಲಾಯಿಸಿದರಾ? ಹೀಗೊಂದು ಸುದ್ದಿ ಹಬ್ಬಿದೆ.
ದೇ ದೇ ಪ್ಯಾರ್ ಖ್ಯಾತಿಯ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ನಿರ್ಮಾಪಕ, ನಟ ಜ್ಯಾಕೀ ಭಗ್ನಾನಿ ಫೆಬ್ರವರಿ 21 ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಮೊದಲು ಈ ತಾರಾ ಜೋಡಿ ವಿದೇಶದಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಇದೀಗ ದಿಡೀರ್ ಆಗಿ ಗೋವಾದಲ್ಲಿ ಮದುವೆಯಾಗಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ದಿಡೀರ್ ಲೊಕೇಷನ್ ಬದಲಾಗಿದ್ದು ಹೇಗೆ?
ಮದುವೆಗೆ ಕೆಲವೇ ದಿನಗಳ ಮೊದಲು ಈ ಜೋಡಿ ತಮ್ಮ ಮದುವೆ ಸ್ಥಳವನ್ನು ಬದಲಾಯಿಸಿದೆ. ಇದಕ್ಕೆ ಕಾರಣ ಪ್ರಧಾನಿ ಮೋದಿಯವರು ಇತ್ತೀಚೆಗೆ ಮಾಡಿದ್ದ ಮನವಿ ಕಾರಣ ಎನ್ನಲಾಗಿದೆ. ಇತ್ತೀಚೆಗೆ ಮೋದಿ ಶ್ರೀಮಂತ ಜೋಡಿಗಳು ವಿದೇಶಗಳಲ್ಲಿ ಮದುವೆಯಾಗುವ ಬದಲು ತಮ್ಮ ಭಾರತದಲ್ಲೇ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳಿ. ಇದರಿಂದ ಇಲ್ಲಿನವರಿಗೆ ಉದ್ಯೋಗ ಸಿಕ್ಕಂತಾಗುತ್ತದೆ. ನಮ್ಮ ಉದ್ಯಮ ಬೆಳೆಯುತ್ತದೆ ಎಂದು ಕರೆಕೊಟ್ಟಿದ್ದರು. ಇದೀಗ ಪ್ರಧಾನಿ ಮೋದಿಯವರ ಕರೆಯಿಂದ ಪ್ರಭಾವಿತರಾಗಿ ಇಬ್ಬರೂ ಭಾರತದಲ್ಲೇ ಮದುವೆಯಾಗಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಇಬ್ಬರೂ ತಮ್ಮ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಫೆಬ್ರವರಿ 21 ರಂದು ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ಸಿನಿ ಸ್ನೇಹಿತರೂ ಹಾಜರಾಗಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ನಲ್ಲಿದ್ದ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದೆ.