Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆಗೆ ಮುನ್ನ ಮೋದಿ ಸರ್ಕಾರದಿಂದ ಇನ್ನೊಂದು ಅಸ್ತ್ರ

Modi

Krishnaveni K

ನವದೆಹಲಿ , ಬುಧವಾರ, 31 ಜನವರಿ 2024 (09:20 IST)
Photo Courtesy: Twitter
ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೊಸ ಅಸ್ತ್ರಗಳನ್ನು ಬಳಸುವುದು ಖಚಿತ.

ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿ ಬಿಜೆಪಿ ಕೊಟ್ಟ ಮಾತು ಉಳಿಸಿಕೊಂಡು ಹಿಂದೂ ಆಸ್ತಿಕರ ಮನಸ್ಸು ಗೆದ್ದಿದೆ. ಇನ್ನೊಂದೆಡೆ ಕಾಂಗ್ರೆಸ್ ರಾಮಮಂದಿರ ಉದ್ಘಾಟನೆಗೆ ಬಾರದೇ ಇರುವ ಮೂಲಕ ಆ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದೆ. ವಿಪಕ್ಷಗಳ ಮೈತ್ರಿಕೂಟದಲ್ಲಿ ಬಿರುಕು ಮತ್ತು ಮೋದಿ ವರ್ಚಸ್ಸು ಬಿಜೆಪಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇದರ ನಡುವೆ ಬಿಜೆಪಿ ಮತ್ತೊಂದು ಮಹಾ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಜಾರಿಯಾಗುತ್ತಾ ಸಿಎಎ?
ಇತ್ತೀಚೆಗಷ್ಟೇ ಕೇಂದ್ರ ಸಚಿವ ಶಾಂತನು ಠಾಕೂರ್ ಏಳು ದಿನಗಳಲ್ಲಿ ಸಿಎಎ ಜಾರಿ ಮಾಡುವುದಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಕೋಲಾಹಲಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವೋಟ್ ಗಾಗಿ ಸಿಎಎ ಅಸ್ತ್ರ ಬಳಸುತ್ತಿದೆ. ಪ.ಬಂಗಾಲದಲ್ಲಿ ಏನೇ ಆದರೂ ಸಿಎಎ ಜಾರಿಯಾಗಲು ಬಿಡಲ್ಲ ಎಂದು ಗುಡುಗಿದ್ದಾರೆ.

ಏನಿದು ಸಿಎಎ? ವಿಪಕ್ಷಗಳ ಆರೋಪವೇನು?
ಪೌರತ್ವ ತಿದ್ದುಪಡಿ ಖಾಯಿದೆ ಅಥವಾ ಸಿಎಎಯನ್ನು 2019 ರಲ್ಲಿ ಸಂಸತ್ತಿನಲ್ಲಿ ಪಾಸ್ ಮಾಡಲಾಗಿತ್ತು. ಅದರಂತೆ 2014 ರ ಡಿಸೆಂಬರ್ ಒಳಗಾಗಿ ಭಾರತಕ್ಕೆ ಬಂದು ಇಲ್ಲಿಯೇ ನೆಲೆ ನಿಂತ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದಂತಹ ದೇಶಗಳಿಂದ ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರಿಗೆ ಇಲ್ಲಿನ ಪೌರತ್ವ ನೀಡುವುದಾಗಿದೆ. ಆದರೆ ಈಗ ಪ್ರಸ್ತಾಪಿಸಲಾಗಿರುವ ಖಾಯಿದೆಯಿಂದ ಬಿಜೆಪಿ ವೋಟ್ ಬ್ಯಾಂಕ್ ಸೃಷ್ಟಿಸಲಿದೆ. ಹೀಗಾಗಿ ಇದನ್ನು ಎಲ್ಲಾ ಸಮುದಾಯದವರಿಗೆ ವಿಸ್ತರಿಸಬೇಕು ಎಂಬುದು ವಿಪಕ್ಷಗಳ ಆರೋಪ.

ಆದರೆ ಲೋಕಸಭೆ ಚುನಾವಣೆಗೆ ಮೊದಲು ಬಿಜೆಪಿ ಈ ಅಸ್ತ್ರ ಹೊರ ಬಿಡುತ್ತಾ ಅಥವಾ ಕೊನೆಯ ಕ್ಷಣದಲ್ಲಿ ವಿವಾದ ಬೇಡವೆಂದು ಸುಮ್ಮನಾಗುತ್ತಾ ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆರೆಗೋಡು ಪ್ರಕರಣದಲ್ಲಿ ಕಾಂಗ್ರೆಸ್‌ ನಿಂದ ಸುಳ್ಳುದಾಖಲೆ ಸೃಷ್ಟಿ – ಎಚ್‌ಡಿಕೆ