Publish Date: Sat, 02 Mar 2024 (11:42 IST)
Updated Date: Sat, 02 Mar 2024 (11:42 IST)
ಬೆಂಗಳೂರು: ನಮ್ಮ ಮದುವೆ, ಪ್ರೇಮ ಜೀವನ ಹೇಗಿರುತ್ತದೆ ಎಂಬುದು ನಮ್ಮ ರಾಶಿಗೆ ಅನುಗುಣವಾಗಿರುತ್ತದೆ. ಹಾಗಿದ್ದರೆ ಯಾವ ರಾಶಿಯವರಿಗೆ ಬೇಗನೇ ಮದುವೆಯಾಗುತ್ತದೆ ಮತ್ತು ಯಾರು ಮದುವೆಯಾಗಿ ಖುಷಿಯಾಗಿರುತ್ತಾರೆ ನೋಡೋಣ.
ಎಲ್ಲರೂ ಜೀವನದಲ್ಲಿ ಬೇಗನೇ ಮದುವೆಯಾಗಿ ಸೆಟಲ್ ಆಗೋಣ ಎಂದು ಯೋಚಿಸುವುದಿಲ್ಲ. ಆದರೆ ಕೆಲವು ರಾಶಿಯವರು ಜೀವನದಲ್ಲಿ ಉತ್ತಮ ಸಂಗಾತಿಯನ್ನು ಕಂಡುಕೊಂಡು ಬೇಗನೇ ಮದುವೆಯಾಗಿ ಸೆಟಲ್ ಆಗಿಬಿಡೋಣ ಎಂದು ಯೋಚಿಸುತ್ತಾರೆ. ಅಂತಹ ಐದು ರಾಶಿಗಳಿವೆ.
ಮೇಷ: ಈ ರಾಶಿಯವರು ಬೇಗನೇ ಮದುವೆಯಾಗಲು ಬಯಸುತ್ತಾರೆ. ಜೀವನದಲ್ಲಿ ಎಲ್ಲವನ್ನೂ ಚಾಲೆಂಜ್ ಆಗಿ ಸ್ವೀಕರಿಸುವ ಸ್ವಭಾವದವರು. ಅದೇ ರೀತಿ ಮದುವೆಯನ್ನೂ ಒಂದು ಚಾಲೆಂಜ್ ಆಗಿ ಸ್ವೀಕರಿಸಲು ಬಯಸುತ್ತಾರೆ.
ವೃ಼ಷಭ: ಈ ರಾಶಿಯವರು ಪ್ರೀತಿ, ಸಂಬಂಧಗಳ ಬಗ್ಗೆ ಗಾಢ ನಂಟು ಇಟ್ಟುಕೊಳ್ಳುತ್ತಾರೆ. ಇವರು ಸ್ಥಿರತೆಗೆ ಹೆಸರುವಾಸಿ. ಅದೇ ರೀತಿ ಸಂಗಾತಿ ವಿಚಾರದಲ್ಲೂ. ಒಮ್ಮೆ ಒಪ್ಪಿಕೊಂಡಿದರ ಕೈ ಬಿಡುವ ಮಾತೇ ಇಲ್ಲ. ಇವರು ಜೀವನದಲ್ಲಿ ಬೇಗನೇ ಸೆಟ್ಲ್ ಆಗಲು ಬಯಸುತ್ತಾರೆ.
ಕರ್ಕಟಕ: ಇವರು ಕುಟುಂಬ ಜೀವನಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವದವರು. ಕುಟುಂಬ, ಜವಾಬ್ಧಾರಿಗಳ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ತಮ್ಮವರನ್ನು ನೋಡಿಕೊಳ್ಳುವುದೆಂದರೆ ಇವರಿಗೆ ತುಂಬಾ ಇಷ್ಟ. ಹೀಗಾಗಿ ಮದುವೆಯಲ್ಲೂ ಆಸಕ್ತಿ ಹೊಂದಿರುತ್ತಾರೆ.
ತುಲಾ ರಾಶಿ: ಇವರನ್ನು ಆಳುವ ಗ್ರಹ ಬುಧ. ಹೀಗಾಗಿ ಪ್ರೀತಿ, ಭಾವನೆಗಳ ವಿಚಾರದಲ್ಲಿ ಇವರನ್ನು ಮೀರಿಸುವವರೇ ಇಲ್ಲ. ಹೀಗಾಗಿ ತಮ್ಮ ಜೀವನ ಸಂಗಾತಿಯನ್ನು ಕಂಡುಕೊಂಡು ಅವರ ಜೊತೆಗೆ ಪ್ರೀತಿ ಹಂಚಿಕೊಳ್ಳಲು ತುದಿಗಾಲಲ್ಲಿರುತ್ತಾರೆ.
ಮೀನ: ಈ ರಾಶಿಯವರು ಭಾವನಾತ್ಮಕ ಮತ್ತು ಕಲ್ಪನಾ ಲೋಕದಲ್ಲಿರುತ್ತಾರೆ. ಹೀಗಾಗಿ ಮದುವೆ, ಸಂಬಂಧದ ಬಗ್ಗೆ ತಮ್ಮದೇ ಸುಮಧುರ ಕಲ್ಪನೆಯಿಟ್ಟುಕೊಂಡಿರುತ್ತಾರೆ. ಹೀಗಾಗಿ ಮದುವೆ ಸಂಬಂಧದಲ್ಲಿ ಅತೀವ ಆಸಕ್ತಿ ಹೊಂದಿರುತ್ತಾರೆ.