Select Your Language

Notifications

webdunia
webdunia
webdunia
webdunia

ಕಸ ಬುಟ್ಟಿಯನ್ನು ಮನೆಯ ಯಾವ ದಿಕ್ಕಿಗೆ ಇಟ್ಟರೆ ಸೂಕ್ತ ತಿಳಿಯಿರಿ

Dustbin

Krishnaveni K

ಬೆಂಗಳೂರು , ಸೋಮವಾರ, 26 ಫೆಬ್ರವರಿ 2024 (09:23 IST)
Photo Courtesy: facebook
ಬೆಂಗಳೂರು: ಮನೆಯಲ್ಲಿ ಪ್ರತಿಯೊಂದು ವಸ್ತುವನ್ನೂ ಆಯಾ ಜಾಗದಲ್ಲಿ ಇಟ್ಟರೇ ಸೂಕ್ತ. ವಾಸ್ತು ಪ್ರಕಾರ ನಾವು ನಿತ್ಯ ಬಳಸುವ ಕಸದ ಬುಟ್ಟಿಗೂ ಎಲ್ಲಿ ಇಡಬೇಕೆಂದು ನಿಯಮವಿದೆ.

ಕಸದ ಬುಟ್ಟಿ ಎಂದರೆ ಅದು ಬೇಡದ ವಸ್ತು ಬಿಸಾಕುವ ಸ್ಥಳ ಅಥವಾ ಪಾತ್ರೆ ಎಂಬ ಉಡಾಫೆ ನಮಗಿರುತ್ತದೆ. ಅದು ಎಲ್ಲಿಟ್ಟರೂ, ಹೇಗಿಟ್ಟರೂ ನಡೆಯುತ್ತದೆ ಎಂಬ ಜಾಯಮಾನ ನಮ್ಮದು. ಆದರೆ ವಾಸ್ತು ಪ್ರಕಾರ ಹಾಗಲ್ಲ. ವಾಸ್ತು ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಯನ್ನು ಎಲ್ಲೆಂದರಲ್ಲಿ ಇಡುವಂತಿಲ್ಲ. ಅದಕ್ಕೂ ನಿಯಮವಿದೆ. ಯಾವ ದಿಕ್ಕಿಗೆ ಇಟ್ಟರೆ ಸೂಕ್ತ ಎಂಬ ಶಾಸ್ತ್ರವಿದೆ.

ಯಾವುದೇ ವಸ್ತುವನ್ನೂ ಎಲ್ಲಿ ಇಡಬೇಕೋ ಅಲ್ಲಿಟ್ಟರೆ ಮಾತ್ರ ಆ ಮನೆಗೆ ಸಮೃದ್ಧಿ. ಇಲ್ಲದೇ ಹೋದರೆ ಅನೇಕ ಕಷ್ಟ, ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.  ಕಸದ ಬುಟ್ಟಿ ಮತ್ತು ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೂ ಸಂಬಂಧವಿದೆ. ತಪ್ಪು ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದ ನಮಗೆ ಆರ್ಥಿಕ ಸಂಕಷ್ಟಗಳು ಎದುರಾಗಬಹುದು.

ಹೀಗಾಗಿ ಮನೆಯ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಈ ಎರಡು ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದ ನೀವು ಒಳ್ಳೆಯ ಫಲಗಳನ್ನು ಕಾಣಬಹುದು. ಇಲ್ಲದೇ ಹೋದರೆ ಹಣಕಾಸಿನ ಸಂಕಷ್ಟ, ಉದ್ಯೋಗ ನಷ್ಟ ಭೀತಿ, ಸಾಲದ ಭಯ ಇತ್ಯಾದಿ ಎದುರಾಗಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?