Select Your Language

Notifications

webdunia
webdunia
webdunia
webdunia

ಮಕರ ರಾಶಿಯವರ ಅದೃಷ್ಟ ಸಂಖ್ಯೆ ಮತ್ತು ಬಣ್ಣ ಯಾವುದು ತಿಳಿಯಿರಿ

Astrology

Krishnaveni K

ಬೆಂಗಳೂರು , ಬುಧವಾರ, 21 ಫೆಬ್ರವರಿ 2024 (13:06 IST)
ಬೆಂಗಳೂರು: ಪ್ರತಿಯೊಂದು ರಾಶಿಗೂ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ವಾರ ಎಂದಿರುತ್ತದೆ. ಅದೇ ರೀತಿ ಇಂದು ಮಕರ ರಾಶಿಯವರ ಅದೃಷ್ಟ ಸಂಖ್ಯೆ ಮತ್ತು ಬಣ್ಣ ಯಾವುದು ಎಂದು ತಿಳಿದುಕೊಳ್ಳೋಣ.

ಮಕರ ರಾಶಿಯವರ ಗುಣ ಸ್ವಭಾವಗಳು
ಮಕರ ರಾಶಿಯವರು ಹಣಕಾಸಿನ ವಿಚಾರದಲ್ಲಿ ಶ್ರೀಮಂತರಾಗಿರುತ್ತಾರೆ. ಯಾವುದೇ ಕೆಲಸವನ್ನೂ ಏಕಾಗ್ರತೆಯಿಂದ, ಶ್ರದ್ಧೆಯಿಂದ ಮಾಡುತ್ತಾರೆ. ಅತೀವ ಬುದ್ಧಿವಂತರೂ ಆಗಿರುತ್ತಾರೆ. ಕಠಿಣ ಪರಿಶ್ರಮ ಪಡಲು ಅವರು ಇಷ್ಟಪಡುತ್ತಾರೆ. ಅವರ ಮೇಲೆ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಕೆಲಸ ಮಾಡಿ ತೋರಿಸುವ ಜಾಣರು. ಆದರೆ ಈ ರಾಶಿಯವರು ಜೀವನವನ್ನು ತೀರಾ ಗಂಭೀರವಾಗಿ ಪರಿಗಣಿಸುತ್ತಾರೆ. ಕೆಲವರಿಗೆ ಅಧಿಕಾರ ಚಲಾಯಿಸುತ್ತಾರೆ ಎನಿಸಬಹುದು. ಅವರ ಹಠವಾದಿ ಮತ್ತು ಅತಿಯಾಗಿ ಕೆಲಸ ಮಾಡುವ ಚಾಳಿ ಇತರರಿಗೆ ಕಿರಿ ಕಿರಿ ಎನಿಸಬಹುದು. ಸೋಲುವುದಕ್ಕೆ ಭಯಪಡುತ್ತಾರೆ.

ಅದೃಷ್ಟ ಸಂಖ್ಯೆ ಮತ್ತು ಬಣ್ಣ
ಮಕರ ರಾಶಿಯವರಿಗೆ ಕಪ್ಪು ಮತ್ತು ಇಂಡಿಗೊ ಬಣ್ಣ ಅದೃಷ್ಟ ತರುತ್ತದೆ. ಈ ಬಣ್ಣಗಳ ಬಟ್ಟೆ, ವಸ್ತು ಅವರಿಗೆ ಅದೃಷ್ಟ ತಂದುಕೊಡುತ್ತದೆ. ಸಂಖ್ಯೆಗಳನ್ನು ನೋಡಿದರೆ 6, 9 ಮತ್ತು 8 ಇವರ ಅದೃಷ್ಟದ ಸಂಖ್ಯೆಗಳು. ಯಾವುದೇ ಕೆಲಸ ಮಾಡುವುದಿದ್ದರೆ ಈ ಸಂಖ‍್ಯೆಗೆ ಅನುಗುಣವಾಗಿ ಮಾಡಿದರೆ ಉತ್ತಮ. ಈ ರಾಶಿಯವರಿಗೆ ಶನಿ ಅಧಿಪತಿಯಾದ ಶನಿವಾರ ಅದೃಷ್ಟದ ದಿನವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?