Publish Date: Sat, 17 Feb 2024 (11:57 IST)
Updated Date: Sat, 17 Feb 2024 (11:59 IST)
ಬೆಂಗಳೂರು: ಪ್ರತಿಯೊಂದು ರಾಶಿಯವರಿಗೂ ಅದೃಷ್ಟದ ಬಣ್ಣ ಮತ್ತು ಸಂಖ್ಯೆ ಎಂದಿರುತ್ತದೆ. ಇಂದು ಕನ್ಯಾ ರಾಶಿಯವರ ಅದೃಷ್ಟದ ಬಣ್ಣ ಮತ್ತು ಸಂಖ್ಯೆ ಯಾವುದು ಎಂದು ತಿಳಿದುಕೊಳ್ಳೋಣ.
ಕನ್ಯಾ ರಾಶಿಯವರ ಗುಣ ಸ್ವಭಾವಗಳು
ಕನ್ಯಾ ರಾಶಿಯವರು ವಿದ್ಯಾವಂತರು, ಅಪಾರ ಬುದ್ಧಿವಂತಿಕೆಯುಳ್ಳವರೂ ಆಗಿರುತ್ತಾರೆ. ಅವರು ಗಾಸಿಪ್ ಮಾಡುವುದನ್ನು ಇಷ್ಪಪಡುತ್ತಾರೆ. ಅದೇ ರೀತಿ ಇನ್ನೊಬ್ಬರು ಹೇಗೆ ಏನು ಎಂಬುದನ್ನು ಸರಿಯಾಗಿ ಲೆಕ್ಕಾಚಾರ ಹಾಕುತ್ತಾರೆ. ಆದರೆ ಬುದ್ಧಿವಂತಿಕೆಯಲ್ಲಿ ಮೀರಿಸುವವರಿರಲ್ಲ. ಜ್ಞಾನವಂತರಾಗಿರುತ್ತಾರೆ. ಇವರು ಗುಣಮಟ್ಟ, ಸ್ಟೈಲ್ ಕಡೆಗೆ ಹೆಚ್ಚಿನ ಗಮನ ಕೊಡುತ್ತಾರೆ. ಅವರ ಹದ್ದಿನಗಣ‍್ಣಿನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಆದರೆ ಕನ್ಯಾ ರಾಶಿಯವರ ಬೇಡದ ಗುಣವೆಂದರೆ ಅವರು ತಮ್ಮ ಬಗ್ಗೆ ತಾವೇ ಹೊಗಳಿಕೊಳ್ಳುವ ಸ್ವಭಾವದವರು. ಸ್ವಲ್ಪ ಹೊತ್ತಾದ ಮೇಲೆ ಅವರ ಜೊತೆ ಕಾಲ ಕಳೆಯುವುದು ಬೋರ್ ಎನಿಸಬಹುದು. ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸವೇ ಅವರಿಗೆ ಮುಳುವಾಗಬಹುದು.
ಕನ್ಯಾ ರಾಶಿಯವರ ಅದೃಷ್ಟದ ಬಣ್ಣ ಮತ್ತು ಸಂಖ್ಯೆ
ಕನ್ಯಾ ರಾಶಿಯವರಿಗೆ 6,7, 3, 17 ಮತ್ತು 58 ಸಂಖ್ಯೆಗಳು ಲಾಭ ಮತ್ತು ಅದೃಷ್ಟ ತಂದುಕೊಡಬಲ್ಲದು. ಈ ಸಂಖ್ಯೆಯನ್ನು ಒಳಗೊಂಡಂತೆ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಉತ್ತಮ. ಇವರಿಗೆ ಬುಧವಾರ ಅದೃಷ್ಟದ ದಿನವಾಗಿದ್ದು, ಈ ದಿನ ಅದೃಷ್ಟ ಖುಲಾಯಿಸುತ್ತದೆ. ಈ ರಾಶಿಯವರು ಹಸಿರು, ಹಳದಿ ಮತ್ತು ಬಿಳಿ ಬಣ್ಣದ ಬಟ್ಟೆ ಧರಿಸುವುದು ಅವರಿಗೆ ಅದೃಷ್ಟದಾಯಕವಾಗಿರುತ್ತದೆ.