Select Your Language

Notifications

webdunia
webdunia
webdunia
webdunia

ಯಾವ ವಾರ ಯಾವ ಬಣ್ಣದ ಬಟ್ಟೆ ಧರಿಸಬೇಕು?

Astrology

Krishnaveni K

ಬೆಂಗಳೂರು , ಶನಿವಾರ, 10 ಫೆಬ್ರವರಿ 2024 (09:42 IST)
ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾರದ ಏಳೂ ದಿನಕ್ಕೂ ಅದರದ್ದೇ ಆದ ಮಹತ್ವವಿದೆ. ಹೀಗಾಗಿ ಈ ಏಳು ದಿನಗಳು ನಿಮ್ಮ ಲಕ್ಕಿ ದಿನವಾಗಬೇಕಾದರೆ ಯಾವ ವಾರ ಯಾವ ಬಣ‍್ಣದ ಬಟ್ಟೆ ಧರಿಸಬೇಕು ನೋಡಿ.

ಪ್ರತಿ ದಿನ ಎದ್ದು ಹೊರಗಡೆ ಹೊರಟಾಗ ಇಂದು ಯಾವ ಡ್ರೆಸ್ ಹಾಕಲಿ ಎಂಬ ಜಿಜ್ಞಾಸೆ ಎಲ್ಲರಿಗೂ ಮೂಡುತ್ತದೆ. ಅದಕ್ಕಾಗಿ ಯಾವ ಬಣ್ಣದ ಬಟ್ಟೆ ಯಾವ ದಿನ ಧರಿಸಿದರೆ ಸೂಕ್ತ ಎಂದು ತಿಳಿದುಕೊಂಡು ಧರಿಸಿದರೆ ನಿಮ್ಮ ದಿನವೂ ಚೆನ್ನಾಗಿರುತ್ತದೆ. ಹಾಗಿದ್ದರೆ ಯಾವ ದಿನ ಯಾವ ಬಣ್ಣ ಸೂಕ್ತ ನೋಡೋಣ.

ಭಾನುವಾರ: ಭಾನುವಾರವೆಂದರೆ ಸೂರ್ಯ ದೇವನ ವಾರ. ಸೂರ್ಯನೆಂದರೆ ನಮಗೆ ಥಟ್ಟನೇ ನೆನಪಾಗುವ ಕಲರ್ ಕೆಂಪು. ಹೀಗಾಗಿ ಈ ದಿನಕ್ಕೆ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಸೂಕ್ತ.
ಸೋಮವಾರ: ಸೋಮವಾರ ಶಿವ, ಚಂದ್ರನಿಗೆ ಹೇಳಿಮಾಡಿಸಿದ ದಿನ. ಶಶಿ ಎಂದರೇ ತಂಪು, ಬಿಳಿಯ ಸಂಕೇತ. ಹೀಗಾಗಿ ಈ ದಿನಕ್ಕೆ ಬಿಳಿ ಬಣ್ಣದ ಬಟ್ಟೆ ಧರಿಸಬಹುದು.
ಮಂಗಳವಾರ: ಕುಜ ಅಧಿಪತಿಯಾಗಿರುವ ದಿನ ಮಂಗಳವಾರ. ಈ ದಿನಕ್ಕೆ ಕೆಂಪು ಬಣ್ಣದ ಬಟ್ಟೆ ಸೂಕ್ತ. ಯಾಕೆಂದರೆ ಕುಜನೆಂದರೆ ಕೆಂಪು ಬಣ್ಣದ ಸಂಕೇತ.
ಬುಧವಾರ: ಬುಧ ಅಧಿಪತಿಯಾಗಿರುವ ಬುಧವಾರ ಹಸಿರು ಬಣ್ಣದ ಬಟ್ಟೆ ಧರಿಸಿದರೆ ಸೂಕ್ತ. ಜೊತೆಗೆ ಪಚ್ಚೆ ಕಲ್ಲಿನ ಆಭರಣ ದರಿಸಿದರೆ ಶ್ರೇಷ್ಠ.
ಗುರುವಾರ: ಗುರು ಅಧಿಪತಿಯಾಗಿರುವ ಗುರುವಾಗ ಹಳದಿ ಬಣ್ಣದ ಬಟ್ಟೆ ಧರಿಸಿದರೆ ನಿಮಗೆ ಶುಭವಾಗುತ್ತದೆ. ಇದರಿಂದ ನಿಮ್ಮ ದಿನ ಸಮೃದ್ಧಿಯಾಗಿರುತ್ತದೆ.
ಶುಕ್ರ: ಶುಕ್ರ ಅದಿಪತಿಯಾಗಿರುವ ಶುಕ್ರವಾರ ಗುಲಾಬಿ, ತಿಳಿ ನೇರಳೆ ಅಥವಾ ಬಿಳಿ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ. ಇದು ಶುಕ್ರ ಮತ್ತು ಚಂದ್ರನನ್ನು ಪ್ರತಿನಿಧಿಸುವ ಬಣ್ಣವಾಗಿದೆ.
ಶನಿವಾರ: ಶನಿ ಅಧಿಪತಿಯಾಗಿರುವ ಶನಿವಾರ ಕಪ್ಪು, ನೀಲಿ ಅಥವಾ ಗಾಢ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ. ಶನಿಯನ್ನು ಗಾಢ ಬಣ್ಣಗಳಿಂದ ಗುರುತಿಸುತ್ತಾರೆ. ಹೀಗಾಗಿ ಇಂತಹ ಬಣ್ಣದ ಬಟ್ಟೆ ಧರಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?