Select Your Language

Notifications

webdunia
webdunia
webdunia
webdunia

ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಳ್ಳಬಾರದು ಯಾಕೆ

Mirror

Krishnaveni K

ಬೆಂಗಳೂರು , ಬುಧವಾರ, 14 ಫೆಬ್ರವರಿ 2024 (08:30 IST)
WD
ಬೆಂಗಳೂರು: ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಂಡರೆ ಮನೆಗೆ ಒಳ್ಳೆಯದಲ್ಲ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಹಾಗಿದ್ದರೆ ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಂಡರೆ ಏನಾಗುತ್ತದೆ ನೋಡೋಣ.

ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇದ್ದೇ ಇರುತ್ತದೆ. ಇದು ಅತ್ಯಂತ ಸೂಕ್ಷ್ಮ ವಸ್ತುವಾಗಿದ್ದು, ಕೈ ಜಾರಿ ನೆಲಕ್ಕೆ ಬಿದ್ದರೆ ಚೂರು ಚೂರಾಗುವುದು ಗ್ಯಾರಂಟಿ. ಆದರೆ ಕನ್ನಡಿ ಹೆಣ್ಣಿಗೆ ಅತ್ಯಂತ ಪ್ರಿಯವಾದ ವಸ್ತು. ಇದು ದೇವರ ಪೂಜೆಯಲ್ಲೂ ಬಳಕೆಯಾಗುವ ಸಾಧನ. ಸುಮಂಗಲಿಯ ಲಕ್ಷಣ ಎನ್ನಲಾಗುತ್ತದೆ. ಹೀಗಾಗಿಯೇ ಶುಕ್ರವಾರ ಮತ್ತು ಮಂಗಳವಾರದಂತಹ ದೇವಿಯ ವಾರಗಳಲ್ಲಿ ಕನ್ನಡಿ ಬಿದ್ದು ಒಡೆದು ಹೋದರೆ ಅಶುಭ ಎಂದು ನಂಬುವವರೂ ಇದ್ದಾರೆ.

ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವಾಸ್ತು ಪ್ರಕಾರವೂ ಪ್ರಶಸ್ತವಲ್ಲ. ಕನ್ನಡಿ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಒಂದು ವೇಳೆ ಒಡೆದ ಕನ್ನಡಿಯನ್ನು ಮನೆಯಲ್ಲಿಟ್ಟುಕೊಂಡರೆ ಋಣಾತ್ಮಕ ಶಕ್ತಿಗೆ ಜಾಗ ಮಾಡಿಕೊಟ್ಟಂತೆ. ಕನ್ನಡಿ ಲಕ್ಷ್ಮೀದೇವಿಯ ಸಂಕೇತವಾಗಿದ್ದು, ಒಡೆದ ಕನ್ನಡಿಯಲ್ಲಿ ಮುಖ ನೋಡಿದರೆ ಮನೆಯಲ್ಲಿ ಧನಹಾನಿ, ಅನಾಹುತಗಳು ಸಂಭವಿಸುವ ಸಾಧ‍್ಯತೆಯಿದೆ.

ಹೀಗಾಗಿ ಅಕಸ್ಮಾತ್ತಾಗಿ ಕನ್ನಡಿ ಬಿದ್ದು ಒಡೆದು ಹೋದರೆ ತಕ್ಷಣವೇ ಅದನ್ನು ಎತ್ತಿ ಹೊರಗೆ ಬಿಸಾಕಬೇಕು. ಕನ್ನಡಿಯನ್ನು ಒಡೆದರೂ ಇಟ್ಟುಕೊಂಡರೆ ಅದರಿಂದ ಮನೆಗೆ ಒಳ್ಳೆಯದಾಗುವುದಿಲ್ಲ. ಮನಸ್ಸಿನ ನೆಮ್ಮದಿಯೂ ಕನ್ನಡಿ ಚೂರಿನಂತೇ ಚೂರಾಗುತ್ತದೆ ಎಂಬುದು ನಂಬಿಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?