Select Your Language

Notifications

webdunia
webdunia
webdunia
webdunia

ಮನೆಯಿಂದ ಹೊರಹೋಗುವಾಗ ಇವುಗಳನ್ನು ನೋಡಿದರೆ ಅಪಶಕುನ

Astrology

Krishnaveni K

ಬೆಂಗಳೂರು , ಶನಿವಾರ, 24 ಫೆಬ್ರವರಿ 2024 (13:09 IST)
ಬೆಂಗಳೂರು: ಮನೆಯಿಂದ ಹೊರಹೋಗುವಾಗ ಕೆಲಸ ಸುಸ್ರೂತ್ರವಾಗಿ ನಡೆಯಬೇಕೆಂದರೆ ಕೆಲವೊಂದು ಶಕುನಗಳನ್ನು ನೋಡಬಾರದು. ಕೆಲವೊಂದು ವಿಚಾರಗಳು ನಮಗೆ ಅಪಶಕುನವಾಗಬಹುದು.

ಕೆಲವರಿಗೆ ಇದು ಮೂಢನಂಬಿಕೆ ಎನಿಸಿದರೂ, ನಂಬಿಕೆ ಇರುವವರಿಗೆ ಇದು ನಿಜವೆನಿಸಬಹುದು. ಒಳ್ಳೆಯ ಕೆಲಸಕ್ಕೆಂದು ಮನೆಯಿಂದ ಹೊರಹೋಗುವಾಗ ಶುಭ ವಸ್ತುಗಳು, ಗೋವು, ಮುತ್ತೈದೆಯನ್ನು ನೋಡಿ ಹೋದರೆ ಆ ದಿನದ ನಮ್ಮ ಕೆಲಸ ಸುಗಮವಾಗಿ ನಡೆಯುವುದು ಎಂಬ ನಂಬಿಕೆಯಿದೆ.

ಅದೇ ರೀತಿ ಕೆಲವೊಂದು ವಸ್ತುಗಳನ್ನು ನೋಡಿಕೊಂಡು ಹೋದರೆ ಅಥವಾ ಪ್ರಯಾಣದ ಸಂದರ್ಭದಲ್ಲಿ ಕೆಲವೊಂದು ವಸ್ತು ಅಥವಾ ವಿಚಾರಗಳನ್ನು ನೋಡಿದರೆ ಆ ದಿನ ಅಪಶಕುನದ ಮುನ್ಸೂಚನೆ ಎಂದೇ ಅರ್ಥ. ಅಂತಹ ವಸ್ತುಗಳು ಯಾವುವು ಎಂದು ತಿಳಿದುಕೊಳ್ಳಿ.

ಮನೆಯಿಂದ ಹೊರಹೋಗುವಾಗ ಸೌದೆ ಹೊರೆ, ವಿಧವೆ, ಒಂಟಿ ಬ್ರಾಹ್ಮಣ, ಕಲಹ, ಜೋರಾದ ಗಾಳಿ, ಬೆಂಕಿ, ಬೆಕ್ಕು, ಕೆಂಪು ಬಟ್ಟೆ ಧರಿಸಿದವರು, ಮಜ್ಜಿಗೆ, ರೋಧಿಸುವ ಧ‍್ವನಿ, ಮೃಗಗಳು ಅಪ್ರದಕ್ಷಿಣೆ ಬರುವುದು, ಕಪಿ, ಮೊಲ, ಹಾವು, ಗೂಬೆ ಕೂಗುವುದು, ನಾಯಿ ಬೊಗಳುವುದು, ನೀರಿಲ್ಲದ ಪಾತ್ರೆ ನೋಡುವುದು ನೋಡಿದರೆ ನಮ್ಮ ಪ್ರಯಾಣಕ್ಕೆ ಅಪಶಕುನಗಳು ಎಂದೇ ತಿಳಿದುಕೊಳ್ಳಬೇಕು. ಅದದರ ಬದಲು ಹೆಣ ಎತ್ತಿಕೊಂಡು ಹೋಗುವುದು, ಹಾಲು ತುಂಬಿದ ಪಾತ್ರೆ, ಜೋಡಿ ಎತ್ತು, ಕರುವಿನ ಜೊತೆಗಿರುವ ದನ, ಸುಮಂಗಲಿಯರು, ವೀಳ್ಯದೆಲೆ ಇತ್ಯಾದಿಗಳನ್ನು ನೋಡಿದರೆ ಪ್ರಯಾಣಕ್ಕೆ ಶುಭ ಶಕುನಗಳು ಎಂದೇ ತಿಳಿದುಕೊಳ್ಳಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?