Select Your Language

Notifications

webdunia
webdunia
webdunia
webdunia

Waqf Bill: ವಕ್ಫ್ ಮಸೂದೆ ವಿರುದ್ಧ ಕಾಂಗ್ರೆಸ್ ಸುಪ್ರೀಂಕೋರ್ಟ್ ಗೆ ಮೊರೆ

Jairam Ramesh

Krishnaveni K

ನವದೆಹಲಿ , ಶನಿವಾರ, 5 ಏಪ್ರಿಲ್ 2025 (11:06 IST)
ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಬಿಲ್ ಪ್ರಶ್ನಿಸಿ ವಿಪಕ್ಷ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ.

ವಕ್ಫ್ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದೊಂದಿಗೆ ಪಾಸ್ ಆಗಿದೆ. ಆದರೆ ಈ ಬಿಲ್ ಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ವಿರೋಧ ವ್ಯಕ್ತಪಡಿಸುತ್ತಲೇ ಇತ್ತು. ಇದೀಗ ಕಾಂಗ್ರೆಸ್ ಸುಪ್ರೀಂನಲ್ಲಿ ಪ್ರಶ್ನಿಸಲು ಮುಂದಾಗಿದೆ.

ವಕ್ಫ ತಿದ್ದುಪಡಿ ಬಿಲ್ ಮಂಡಿಸುವ ಮೂಲಕ ಮೋದಿ ಸರ್ಕಾರ ಸಂವಿಧಾನದ ಆಶಯ, ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದನ್ನು ನಾವು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ವಕ್ಫ್ ಮಸೂದೆಯಿಂದ ಮುಸ್ಲಿಮರಿಗೆ ಒಳಿತೇ ಆಗಲಿದೆ ಎಂದು ಬಿಜೆಪಿ ಹೇಳುತ್ತಿದೆ. ಅಕ್ರಮವಾಗಿ ವಕ್ಫ್ ಆಸ್ತಿಯನ್ನು ಕಬಳಿಸುವವರಿಗೆ ಈ ಮಸೂದೆ ಕಡಿವಾಣ ಹಾಕಲಿದೆ ಎನ್ನುತ್ತಿದೆ. ಆದರೆ ಮಸೂದೆಯಲ್ಲಿರುವ ಕೆಲವು ಅಂಶಗಳ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಒಂದು ನಿರ್ಧಾರದಿಂದ 1 ನೇ ತರಗತಿ ಸೇರಲಾಗದೇ ಒದ್ದಾಡುತ್ತಿರುವ ಲಕ್ಷಾಂತರ ಮಕ್ಕಳು