ಛತ್ತೀಸ್ ಘಡ: ಪತ್ನಿಯ ಸಮ್ಮತಿಯಲ್ಲದೇ ಅಸಹಜ ದೈಹಿಕ ಸಂಬಂಧ ಬೆಳೆಸುವುದು ಅಪರಾಧವಲ್ಲ ಎಂದು ಛತ್ತೀಸ್ ಘಡ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತಿ ತನ್ನ ಪ್ರಾಯಪೂರ್ತಿಯಾಗಿರುವ ಪತ್ನಿಯ ಜೊತೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸಿದರೂ ಅದು ಅಪರಾಧವೆನಿಸುವುದಿಲ್ಲ ಎಂದು ಕೋರ್ಟ್ ಪ್ರಕರಣವೊಂದರ ಸಂಬಂಧ ತೀರ್ಪು ನೀಡಿದೆ. ಜಗದಲ್ಪುರ ನಿವಾಸಿಯೊಬ್ಬರ ಮೇಲೆ ದಾಖಲಾಗಿದ್ದ ಅತ್ಯಾಚಾರ ಮತ್ತು ಇತರೆ ಪ್ರಕರಣಗಳನ್ನು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ಜಡ್ಜ್ ನರೇಂದ್ರ ಕುಮಾರ್ ವ್ಯಾಸ್ ಈ ತೀರ್ಪು ನೀಡಿದ್ದಾರೆ.
ಪತ್ನಿಯ ಸಾವಿನ ಬಳಿಕ 2017 ರಲ್ಲಿ ಪತ್ನಿಯ ಸಾವಿನ ಬಳಿಕ ಪತಿಯನ್ನು ಅಸಹಜ ಲೈಂಗಿಕ ಕ್ರಿಯೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಇದರ ವಿಚಾರಣೆ ನಡೆಸಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತ್ನಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೆ ಆಕೆಯ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಾಗುತ್ತದೆ. ಆದರೆ ಪ್ರಾಯ ಪ್ರಬುದ್ಧೆಯಾಗಿರುವ ಪತ್ನಿಯ ಜೊತೆ ಯಾವುದೇ ರೀತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಕೋರ್ಟ್ ತೀರ್ಪಿತ್ತಿದೆ.