ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಹುಟ್ಟುಹಬ್ಬಕ್ಕೆ ತಂದಿದ್ದ ಕೇಕ್ ನ್ನು ಐಫೋನ್ ನಿಂದ ಕತ್ತರಿಸಿದ ವಿಡಿಯೋ ವೈರಲ್ ಆಗಿದೆ.
ಮೊನ್ನೆ ಭಾನುವಾರ ಏಕನಾಥ್ ಶಿಂಧೆ ಜನ್ಮದಿನ ಆಚರಿಸಿಕೊಂಡಿದ್ದರು. ಅವರ ಜನ್ಮದಿನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದರು. ಸಾಕಷ್ಟು ಅಭಿಮಾನಿಗಳು ಮನೆಗೆ ಬಂದು ಶಿಂಧೆಗೆ ಶುಭ ಹಾರೈಸಿದ್ದರು.
ಇದರ ನಡುವೆ ಅಭಿಮಾನಿಗಳು ಏಕನಾಥ ಶಿಂಧೆಗಾಗಿ ಬೃಹತ್ ಗಾತ್ರದ ಕೇಕ್ ತಂದಿದ್ದರು. ಬೆಂಬಲಿಗರನ್ನು ನಿರಾಸೆ ಮಾಡದ ಶಿಂಧೆ ಕೇಕ್ ಕತ್ತರಿಸಲು ಮುಂದಾಗಿದ್ದಾರೆ. ಸಾಮಾನ್ಯವಾಗಿ ಕೇಕ್ ಕತ್ತರಿಸಲು ಚಾಕು ಬಳಸುವುದು ಸಹಜ.
ಆದರೆ ಏಕನಾಥ ಶಿಂಧೆ ಪಕ್ಕದಲ್ಲಿದ್ದವರ ಐಫೋನ್ ಒಂದನ್ನು ತೆಗೆದುಕೊಂಡು ಕೇಕ್ ಕಟ್ ಮಾಡಿದ್ದಾರೆ. ಬಳಿಕ ಕೇಕ್ ಮೆತ್ತಿಕೊಂಡಿದ್ದ ಕೇಕ್ ನ್ನು ಪಕ್ಕದಲ್ಲಿದ್ದವರಿಗೆ ನೀಡಿದ್ದಾರೆ. ಅವರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.