Select Your Language

Notifications

webdunia
webdunia
webdunia
webdunia

ಬ್ರಹ್ಮೋಸ್‌ ದೂರ ಮತ್ತಷ್ಟು ವಿಸ್ತಾರ ! ಪರೀಕ್ಷೆ ಯಶಸ್ವಿ

ಬ್ರಹ್ಮೋಸ್‌ ದೂರ ಮತ್ತಷ್ಟು ವಿಸ್ತಾರ ! ಪರೀಕ್ಷೆ ಯಶಸ್ವಿ
ನವದೆಹಲಿ , ಶುಕ್ರವಾರ, 13 ಮೇ 2022 (09:08 IST)
ನವದೆಹಲಿ: ಸುಖೋಯ್‌ ಯುದ್ಧವಿಮಾನದ ಮೇಲಿಂದ ಇನ್ನಷ್ಟುದೂರ ಸಾಗಬಲ್ಲ ವಿಸ್ತರಿತ ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತ  ಯಶಸ್ವಿಯಾಗಿ ಪ್ರಯೋಗ ನಡೆಸಿದೆ. ಬ್ರಹ್ಮೋಸ್‌ ಮೂಲ ಕ್ಷಿಪಣಿ 290 ಕಿ.ಮೀ. ದೂರ ಸಾಗುತ್ತಿತ್ತು. ವಿಸ್ತರಿತ ಕ್ಷಿಪಣಿ 350 ಕಿ.ಮೀ. ದೂರ ಸಾಗುತ್ತದೆ.
 
ಶಬ್ದಕ್ಕಿಂತ ವೇಗವಾಗಿ ನುಗ್ಗಿ ಶತ್ರುಪಡೆಗಳನ್ನು ಸದೆ ಬಡಿಯುವ, ವಿಶ್ವದ ಅತ್ಯಂತ ಅಪಾಯಕಾರಿ ಕ್ಷಿಪಣಿಗಳಲ್ಲಿ ಒಂದಾಗಿರುವ ಬ್ರಹ್ಮೋಸ್‌ ಕ್ಷಿಪಣಿಯ ದೀರ್ಘ ದೂರ ಕ್ರಮಿಸುವ ಆವೃತ್ತಿಯನ್ನು ಭಾರತೀಯ ನೌಕಾಪಡೆ  ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ.
 
ಬಂಗಾಳ ಕೊಲ್ಲಿಯಲ್ಲಿ ಯುದ್ಧನೌಕೆಯೊಂದರಿಂದ ಚಿಮ್ಮಿದ ಬ್ರಹ್ಮೋಸ್‌ ಕ್ಷಿಪಣಿ, ಶರವೇಗದಲ್ಲಿ ಅತ್ಯಂತ ನಿಖರವಾಗಿ ತನ್ನ ಗುರಿಯನ್ನು ಧ್ವಂಸಗೊಳಿಸಿದೆ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. ಈ ಪರೀಕ್ಷೆಯೊಂದಿಗೆ ಯುದ್ಧಸನ್ನದ್ಧತೆಯನ್ನು ಸಾಬೀತುಪಡಿಸಲಾಗಿದೆ. ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ ಎಂದು ನೌಕಾಪಡೆ ಟ್ವೀಟ್‌ ಮಾಡಿದೆ.
 
ಬ್ರಹ್ಮೋಸ್‌ ಕ್ಷಿಪಣಿಯ ಪರೀಕ್ಷೆಯನ್ನು ನೌಕಾಪಡೆ ಕಾಲಕಾಲಕ್ಕೆ ನಡೆಸುತ್ತದೆ. ಇದು ಶಬ್ದಕ್ಕಿಂತ ವೇಗವಾಗಿ ದಾಳಿ ಮಾಡುವ ಸೂಪರ್‌ಸಾನಿಕ್‌ ಕ್ಷಿಪಣಿಯಾಗಿದೆ. ವೇಗವಾಗಿ ಸಾಗುವ ಕಾರಣ ಕ್ಷಿಪಣಿಗಳಿಂದ ಪ್ರತಿದಾಳಿ ನಡೆಸಿ ಇದನ್ನು ಹೊಡೆದುರುಳಿಸುವುದು ಬಹಳ ಕಷ್ಟ.2006ರಲ್ಲೇ ಬ್ರಹ್ಮೋಸ್‌ ಕ್ಷಿಪಣಿಯನ್ನು ನೌಕಾಪಡೆ ಹಾಗೂ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಯುದ್ಧ ನೌಕೆಗಳಲ್ಲಿ ಬಳಸುವ ಕ್ಷಿಪಣಿಗಳಿಗಿಂತ ಯುದ್ಧ ವಿಮಾನಗಳಿಂದ ಪ್ರಯೋಗಿಸುವ ಕ್ಷಿಪಣಿ ತೀವ್ರ ವೇಗ ಹೊಂದಿರುತ್ತದೆ.
 
ಅತ್ಯಾಧುನಿಕ ಸೂಪರ್‌ಸಾನಿಕ್‌ ಬ್ರಹ್ಮೋಸ್‌ ನೌಕಾ ಮಾದರಿಯ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇದನ್ನು ಐಎನ್‌ಎಸ್‌ ವಿಶಾಖಪಟ್ಟಣದದಿಂದ ಪರೀಕ್ಷಿಸಲಾಗಿದೆ. ಕ್ಷಿಪಣಿಯು ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ಡಿಆರ್‌ಡಿಒ ತಿಳಿಸಿದೆ. 
 
ಕ್ಷಿಪಣಿಯ ಯಶಸ್ವಿ ಉಡಾವಣೆಯು ಭಾರತೀಯ ನೌಕಾಪಡೆಯ ಸನ್ನದ್ಧ ಸ್ಥಿತಿಯನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದು, ಭಾರತೀಯ ನೌಕಾಪಡೆಗೆ ಅಭಿನಂದನೆ ತಿಳಿಸಿದ್ದಾರೆ. ಭಾರತ ಮತ್ತು ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಈ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯನ್ನು ತಯಾರಿಸುತ್ತಿವೆ. ಈ ಕ್ಷಿಪಣಿಗಳು ಶಬ್ಧಕ್ಕಿಂತ 3 ಪಟ್ಟು ಹೆಚ್ಚು ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರ ಸಿಕ್ಕರೆ ರಾಜ್ಯದ ಚಿತ್ರಣವೇ ಬದಲು: ಮಾಜಿ ಸಿಎಂ ಎಚ್‍ಡಿಕೆ