Select Your Language

Notifications

webdunia
webdunia
webdunia
webdunia

ವರ್ಷಾಂತ್ಯದಲ್ಲಿ ಕೆಎಲ್‌ ರಾಹುಲ್‌, ಆತಿಯಾ ಮದುವೆ? ಸುನೀಲ್‌ ಶೆಟ್ಟಿ ಗ್ರೀನ್‌ ಸಿಗ್ನಲ್!‌

Suniel Shetty Athiya KL Rahul ಸುನೀಲ್‌ ಶೆಟ್ಟಿ ಆತಿಯಾ ಕೆಎಲ್‌ ರಾಹುಲ್
bengaluru , ಗುರುವಾರ, 12 ಮೇ 2022 (18:02 IST)
ಕರ್ನಾಟಕ ಸ್ಟಾರ್‌ ಬ್ಯಾಟ್ಸ್‌ ಮನ್‌ ಮತ್ತು ಆತಿಯಾ ಮದುವೆ ಆಗುತ್ತೇನೆ ಅಂದರೆ ನನ್ನ ಅಭ್ಯಂತರ ಇಲ್ಲ ಎಂದು ಹೇಳುವ ಮೂಲಕ ಇಬ್ಬರ ಮದುವೆಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.
ತುಂಬಾ ದಿನಗಳಿಂದ ಜೊತೆಯಾಗಿ ಓಡಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.  ಇದೀಗ ಹೊಸ ಬಂದ ಹೊಸ ವಿಷಯ ಏನೆಂದರೆ ಇಬ್ಬರು ಮದುವೆ ಆಗುತ್ತೇನೆ ಅಂದರೆ ನನ್ನ ಅಭ್ಯಂತರವೇನಿಲ್ಲ. ಇಬ್ಬರಿಗೂ ನನ್ನ ಆಶೀರ್ವಾದ ಇದೆ ಎಂದು ಆತಿಯಾ ತಂದೆ ಹಾಗೂ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಆತಿಯಾ ಮತ್ತು ಕೆಎಲ್‌ ರಾಹುಲ್‌ ಈ ವರ್ಷದ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಸಾಧ್ಯತೆ ಇದೆ. ಇಬ್ಬರೂ ಈಗಾಗಲೇ ಮುಂಬೈನಲ್ಲಿ ಪ್ರತ್ಯೇಕ ಅಪಾರ್ಟ್‌ ಮೆಂಟ್‌ ಖರೀದಿಸಿದ್ದು, ದಾಂಪತ್ಯ ಜೀವನ ಆರಂಭಿಸುವ ಮುನ್ನವೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಕೆಎಲ್‌ ರಾಹುಲ್‌ ಬ್ಯುಸಿ ಇದ್ದು, ಪ್ರಸ್ತುತ ಐಪಿಎಲ್‌ ಟೂರ್ನಿಯಲ್ಲಿ ಲಕ್ನೋ ಸೂಪರ್‌ ಗೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದು, ಇದರ ಬೆನ್ನಲ್ಲೇ ಐಪಿಎಲ್‌ ಟಿ-೨೦ ಟೂರ್ನಿ ಆರಂಭಗೊಳ್ಳಲಿದೆ. ಇದರ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗಳು ನಡೆಯಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಸ್‌ ಐ ನೇಮಕಾತಿ ಅಕ್ರಮ: ಮಂಡ್ಯದ ಕಾಂಗ್ರೆಸ್‌ ಯುವ ಮುಖಂಡ ಅರೆಸ್ಟ್‌