ಭುವನೇಶ್ವರ : ದೇಶೀಯವಾಗಿ ಅಭಿವೃದ್ಧಿಪಡಿಸಿರುವ ವೇಗದ ವಾಯು ಗುರಿ ಭೇದಿಸುವ 'ಅಭ್ಯಾಸ್'ಫ್ಲೈಟ್ ಪರೀಕ್ಷೆಯನ್ನು ಡಿಆರ್ಡಿಒ ಯಶಸ್ವಿಯಾಗಿ ಪೂರೈಸಿದೆ.
ಒಡಿಶಾದ ಬಂಗಾಳಕೊಲ್ಲಿಯ ತೀರದ ಚಾಂದೀಪುರದಲ್ಲಿ ಈ ಪರೀಕ್ಷೆ ನಡೆದಿದೆ ಎಂದು ಡಿಆರ್ಡಿಒ ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಕ್ಷಿಪಣಿ ವ್ಯವಸ್ಥೆಗಳ ಮೌಲ್ಯಮಾಪನಕ್ಕಾಗಿ ಈ ವಾಹನವನ್ನು ವೈಮಾನಿಕ ಗುರಿಯಾಗಿ ಬಳಸಬಹುದು ಎಂದು ಅವರು ಹೇಳಿದ್ಧಾರೆ.
ಏರ್ಕ್ರಾಫ್ಟ್ಕಾರ್ಯಕ್ಷಮತೆಯನ್ನು ಟೆಲಿಮೆಟ್ರಿ, ರಾಡಾರ್ಗಳು ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಸೇರಿದಂತೆ ವಿವಿಧ ಟ್ರ್ಯಾಕಿಂಗ್ ಸೆನ್ಸಾರ್ಗಳ ಮೂಲಕ ಮೇಲ್ವಿಚಾರಣೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.