Select Your Language

Notifications

webdunia
webdunia
webdunia
webdunia

ಮಧ್ಯರಾತ್ರಿ ಗರ್ಲ್ ಫ್ರೆಂಡ್ ಮನೆಗೆ ಬಂದ ಅಪ್ರಾಪ್ತನಿಗೆ ಮನೆಯವರು ಮಾಡಿದ್ದೇನು ಗೊತ್ತಾ?!

ಮಧ್ಯರಾತ್ರಿ ಗರ್ಲ್ ಫ್ರೆಂಡ್ ಮನೆಗೆ ಬಂದ ಅಪ್ರಾಪ್ತನಿಗೆ ಮನೆಯವರು ಮಾಡಿದ್ದೇನು ಗೊತ್ತಾ?!
ಲಕ್ನೋ , ಶನಿವಾರ, 17 ನವೆಂಬರ್ 2018 (09:15 IST)
ಲಕ್ನೋ: ಮಧ್ಯರಾತ್ರಿ ವೇಳೆ ಗರ್ಲ್ ಫ್ರೆಂಡ್ ಮನೆಗೆ ಬಂದು ಸೀಕ್ರೆಟ್ ಆಗಿ ಭೇಟಿಯಾಗಿದ್ದ 16 ರ ಬಾಲಕನನ್ನು ಬಾಲಕಿಯ ಮನೆಯವರೇ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ತಮ್ಮ ಮನೆ ಮಗಳ ಜತೆಗೆ ಬಾಲಕನನ್ನು ನೋಡಿದ ಮನೆಯವರು ಆತನ ಮೇಲೆ ಮಚ್ಚಿನಿಂದ ದಾಳಿ ಮಾಡಿ ಆತನ ಮನೆಯೆದುರೇ ಬಿಟ್ಟು ಹೋಗಿದ್ದರು. ಆದರೆ ತೀವ್ರ ಗಾಯಗೊಂಡಿದ್ದ ಬಾಲಕ ಆಸ್ಪತ್ರೆ ಸಾಗಿಸುವ ಮೊದಲೇ ಸಾವನ್ನಪ್ಪಿದ್ದ.

ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಗಿಯ ತಂದೆಯನ್ನು ಬಂಧಿಸಿದ್ದಾರೆ. ಈ ವೇಳೆ ಆ ಬಾಲಕ ತಮ್ಮ ಪುತ್ರಿಗೆ ಕಾಟ ಕೊಡುತ್ತಿದ್ದ. ಇದಕ್ಕೇ ಈ ಕೃತ್ಯವೆಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆದರೆ ಬಾಲಕಿಗೂ ಈ ಹುಡುಗನ ಮೇಲೆ ಪ್ರೀತಿಯಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಶಬರಿಮಲೆ ವಿವಾದ: ಬಂದ ದಾರಿಗೆ ಮರಳಿದ ತೃಪ್ತಿ ದೇಸಾಯಿ